Saturday, December 8, 2012

ಜಾತಿ..

'ಜಾತಿವಾದ' ದ ಕುರಿತಾಗಿ  ಮಾತನಾಡುವುದೇ ಆದರೆ ನಾನು ನಾಳೆ ಸೂರ್ಯೋದಯ  ನೋಡದಿದ್ದರೂ  ಪರವಾಗಿಲ್ಲ ಅನ್ನುವ ತ್ಯಾಗ  ಮನೋಭಾವ  ಬೇಕು. ಯಾಕೆಂದರೆ  ಜಾತಿ ಕುರಿತಾದ ಮಾತು-ವಾದ -ಸಂವಾದ ಇಂದು ಕತ್ತಿ ಗುಂಡುಗಳ ಮೂಲಕವೂ ಉತ್ತರಿಸುವ  ಮಟ್ಟಕ್ಕೆ ಬೆಳೆದು ನಿಂತಿದೆ. ನಾಳೆ ತಾನು ಹೇಣವಾದರು ಚಿಂತೆಯಿಲ್ಲವೆನ್ನುವವನು ಮಾತ್ರ ಜಾತಿ ಪದ್ಧತಿಯ ಕುರಿತಾಗಿ ಘಂಟಾಘೋಷವಾಗಿ ವಿರೋಧಿಸಬಲ್ಲ;ತನ್ನ ಲೇಖನಿಯಿಂದ ಶತಮಾನಗಳಿಂದ ಮಾನವ ಅತಿರೇಕದಿಂದ ಸಂಗ್ರಹವಾಗಿರುವ ದುಃಖವನ್ನು ಅಕ್ಷರ ಮುತ್ತುಗಳಿಂದ ಚಿತ್ರಿಸಬಲ್ಲ.ಮಾನವ ಇತಿಹಾಸದುದ್ದಕ್ಕೂ ಜಾತಿ-ವರ್ಗ-ಪಂಗಡ  ಮೊದಲಾದ ಪದ್ಧತಿಗಳು  ಹೇಯವಾದುದ್ದೆಂದು ಜಗತಿನಾದ್ಯಂತ  ಹಲವಾರು ದಾರ್ಶನಿಕರು  ಹೇಳಿ ಹೋಗಿದ್ದಾರೆ; ಸಮಾಜವನ್ನು ತಿದ್ದಲು  ಪ್ರಯತ್ನಿಸಿದ್ದಾರೆ; ಆದರು ಫಲ ಕೊಟ್ಟಿಲ್ಲ ಅಂತ ಇವತ್ತಿನ ಧಾರ್ಮಿಕ,ರಾಜಕೀಯ  ಹಾಗು ಸಾಮಾಜಿಕ ವ್ಯವಸ್ಥೆಯನ್ನು ಕೂಲಂಕಸವಾಗಿ  ಅಭ್ಯಸಿಸಿದರೆ ತಿಳಿಯುತ್ತದೆ.  ಹೀಗಿರುವಾಗ ಪ್ರಾಣಕ್ಕೂ  ಸಂಚಕಾರ ತರಬಲ್ಲಂತ  ವಿಷಯದ ಕುರಿತಾಗಿ ಬರೆಯುದೇಕೆ ? ಮಹಾನ್  ವ್ಯಕ್ತಿಗಳಿಂದಲೇ  ಸಾಧ್ಯವಾಗದ ಕೆಲಸವನ್ನು  ನಾನು ಮಾಡುತ್ತೇನೆ ಎಂಬ ಗರ್ವವಾದರು ಯಾಕೆ ?

ಜೀವಸಂಕುಲವನ್ನು  ಗಮನಿಸಿದರೆ  ಕೆಲವೊಂದು  ವಿಷಯಗಳು  ಜೀವಿ  ತನ್ನ ಹುಟ್ಟುಗುಣವನ್ನಾಗಿ ಪಡೆದಿರುತ್ತದೆ. ಉದಾಹರಣೆಗೆ  ಹಕ್ಕಿಗೆ ಗೂಡು  ಕಟ್ಟಬೇಕು ಎಂದು ಯಾರು ತಾನೆ ಕಲಿಸಿರುತ್ತಾರೆ ? ತಾನೆ ಗೂಡು ಕಟ್ಟಿ  ಮರಿಗಳನ್ನು ದೊಡ್ಡದು ಮಾಡಿ  ಜೀವನ ಯಾತ್ರೆ ಮುಂದುವರಿಸುತ್ತದೆ. ಇದು ಹಕ್ಕಿ ಜಾತಿಗೆ ಹುಟ್ಟುಗುಣ. ನಮ್ಮ ಹೆಣ್ಣು ಮಕ್ಕಳು ಕೂಡ ಹಾಗೆ.! ಯಾವಾಗ ತಾವು ತಾಯಿಯಾಗುತ್ತಾರೋ  ಇದಕಿದ್ದಹಾಗೆ  ಅವರಿಗೆ ತಮ್ಮ ಮಗುವಿನ ಮೇಲೆ ತಮ್ಮ ಪ್ರಾಣಕ್ಕಿಂತಲೂ ಅತೀವ  ಪ್ರೀತಿ ಬೆಳೆದು ನಿಲ್ಲುತ್ತದೆ. ಇದು ಮಾನವ ಹೆಣ್ಣು ಜನ್ಮದ ಹುಟ್ಟುಗುಣ. ಅಂತೆಯೇ ತಾನು ಸ್ವತಂತ್ರ; ತಾನು ತನ್ನ ವಿಚಾರವವನ್ನು-ವಿಷಾದವನ್ನು ವ್ಯಕ್ತಪಡಿಸಬಲ್ಲೆ ಅನ್ನುವ ತವಕ, ಆಕಾಂಕ್ಷೆ  ಮಾನವ ಸಹಜವಾದ ಹುಟ್ಟುಗುಣ. ಕೆಲವಾರು ಸ್ವಯಂ-ಪ್ರಯತ್ನ ಬಲದಿಂದ ಈ ಹುಟ್ಟು  ಗುಣ  ಅಡಗಿಸಿಕೊಂಡು ಬದುಕು ಹೇಗಾದರೂ ಸಾಗಲಿ, ಒಟ್ಟಾರೆ ಮುಂದುವರಿದರೆ ಸಾಕು ಎಂಬ ವಾದಕ್ಕೆ ಮರುಳಾಗಿ ಬದುಕುತ್ತಾರೆ. ಆದರೆ  ಇನ್ನು ಕೆಲವರು ನೋವಿನ ಫಲವಾಗಿಯೋ, ಅಥವಾ  ಮಾನವ ಸಹಜಗುಣವನ್ನು  ಯಾಕಾದರೂ ಅಡಗಿಸಿ ಬದುಕೇಂಬ ವೈಚಾರಿಕ ಹಿನ್ನಲೆಯಲ್ಲಿಯೋ ತಮ್ಮ ವಾದವನ್ನು, ತಮ್ಮ ನಂಬಿಕೆಯನ್ನು  ಉದಾರಮನೋಭಾವದಿಂದ  ಸರ್ವರ ಸಮ್ಮುಖದಲ್ಲಿ ನಿವೇದಿಸುತ್ತಾರೆ.  ಹಾಗಾಗಿ  ತನ್ನ ವಿಚಾರವನ್ನು  ವ್ಯಕ್ತ ಪಡಿಸುವುದು ಹಾಗೂ  ಸರ್ವರ ವಿಚಾರಗಳ ಕುರಿತಾಗಿ ಒಂದು ಒಲವು ತೋರುವುದು ತಪ್ಪಲ್ಲ; ಅದು ಕರ್ತವ್ಯ;ಅಂತವರೇ ಈ  ಸಮಾಜವನ್ನು ಕೊಳೆತುನಿಂತ ನೀರಿನ ಹೊಂಡವಾಗಿರಿಸದೆ  ಸ್ವಚ್ಚವಾದ  ಹರಿಯುವ ನೀರಿನ  ನದಿಯನ್ನಾಗಿಸಿದ್ದಾರೆ. ನಾನು ನನ್ನ ವಿಚಾರವನ್ನು  ತಮ್ಮೆಲ್ಲರ  ವಿಚಾರದ ಸಾಲಿಗೆ ಸೇರಿಸಿ 'ನನ್ನದೊಂದು  ಮಾತು' ಎಂದು ಹೇಳಿಕೊಳ್ಳಲು ಸರಿದಿಯಲ್ಲಿ  ನಿಂತಿದ್ದೇನೆ.ತಮ್ಮೆಲ್ಲರ ಹಾಗೆ ಸ್ವಾಸ್ಥ್ಯದಿಂದ  ಕೂಡಿದ  ಪವಿತ್ರವಾದ ಸಮಾಜವನ್ನು, ಹಸನ್ಮುಖಿಯಾಗಿರುವ ಜನರನ್ನು ಕಾಣುವುದೇ ನನ್ನ ಗುರಿ.

ಇವತ್ತು ಜಾತಿವಾದ ಎನ್ನುವುದು ಚಳುವಳಿಯಲ್ಲ; ಅದು ಯಾರ ವಿರುದ್ಧವು ಹೋರಾಟವಲ್ಲ. ಇದು ಕೇವಲ ನಮ್ಮ ಮನಸ್ಸಿಗೆ, ನಮ್ಮ ಹೃದಯಕ್ಕೆ  ನಾವೇ 'ಜಾತಿ ಒಂದು ತಪ್ಪು ಕಲ್ಪನೆ' ಎಂದು ಅರಿಕೆಯನ್ನುಂಟು  ಮಾಡಿಕೊಳ್ಳುವುದಾಗಿದೆ. ನಾವು ಈ ವಿಷಯದಲ್ಲಿ ತಪ್ಪಿ ಹೋಗುವುದೇ  ಜಾತಿ ಕುರಿತಾದ ವ್ಯವಸ್ಥೆಗೆ ಯಾರೋ ಕಾರಣವೆಂದು ಭಾವಿಸಿ. ಎಷ್ಟೋ ಸಾರಿ, ಜಾತಿವಾದದ ವ್ಯವಸ್ಥೆಯ  ಕುರಿತಾದ ಮಾತುಗಳಲ್ಲಿ ಬ್ರಾಹ್ಮಣರೇ  ಕಾರಣವೆಂದು  ಹೇಳಿ ಬ್ರಾಹ್ಮಣ ಜಾತಿಯನ್ನು ಅಪಹಾಸ್ಯವೋ, ಕೋಪದಿಂದಲೋ  ಕಾಣುವುದನ್ನು ಗಮನಿಸಿದ್ದೇನೆ. ಇನ್ನೂ  ಕೆಲವೊಮ್ಮೆ ಬ್ರಾಹ್ಮಣ ಜಾತಿಗೆ ಸೇರಿದವರು, ತಮ್ಮ ವಿರುದ್ಧ  ಒಂದು ವಾದ ಸುರುವಾಗಿದೆ, ಅಪಹಾಸ್ಯಕ್ಕೆ ಗುರಿ ಮಾಡುತಿದ್ದಾರೆ  ಅಂದುಕೊಂಡುದ್ದುಂಟು.

ಇನ್ನು ಕೇಳವರ್ಗದವರೆಂದು ಕರೆಸಿಕೊಂಡವರು ತಮ್ಮ ನೋವಿನ ಕತೆಗೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಅರ್ಧಶತಮಾನವೇ ಕಳೆದರು ತಾವು ಇನ್ನು ಇಂಥ  ವಾದ-ಸಂವಾದದಲ್ಲಿಯೇ ಇದ್ದೇವೆ ಎಂದು ಜಾತಿವಾದದ  ವಾದ-ವಿವಾದಗಳಿಗೆ  ತಮ್ಮದು ಒಂದು ಮಾತು ಇರಲಿ ಎಂದು ಮುಂದೆ ಬಂದವರನ್ನು  ನೋಡಿದ್ದೇನೆ. ಅದೇ ಜಾತಿವಾದ  ಮೀಸಲಾತಿಯ  ಕುರಿತಾಗಿ ಕಾವು ಏರಿ ನಿಂತಾಗ   ತಮ್ಮಗೆ ಸರ್ಕಾರ ನೀಡುವ  ಕಿಂಚ್ಚಿತ್  ಸಹಾಯಕ್ಕೆ ಬೆಂಕಿ ಇಡುತ್ತಿದ್ದಾರಲ್ಲ  ಎಂದು ನೊಂದುಕೊಂಡವರು ಇದ್ದಾರೆ.
 
ಬರೆಯುತ್ತಿರುವ, ಹುಟ್ಟುಗುಣವನ್ನು  ಎತ್ತಿ ಹಿಡಿಯುತ್ತೇನೆ ಎಂದು ಮುಂದೆ ಬಂದಿರುವ ಈ  ಲೇಖಕನಿಗೂ ಒಂದು ಜಾತಿಯಿಲ್ಲವೇ? ಜಾತಿಯಿದ್ದರೆ ಇವನಾವ ನಡು ಜಾತಿಯವನು ? ಈ  ಕಡೆ ಬ್ರಾಹ್ಮಣರ  ಪರವಾಗಿಯೂ ಇಲ್ಲ ಅತ್ತ ಕೆಳವರ್ಗದವರ  ಪರವಾಗಿಯೂ ಇಲ್ಲದಂತೆ ತೋರಿಸಿಕೊಳ್ಳುತ್ತಾನೆ ಯಾಕೆ ಎಂದು ಪ್ರಶ್ನಿಸಿಕೊಂಡರೆ  ತಪ್ಪೇನು ಇಲ್ಲ. ಆದರೆ ಇವತ್ತು ನಾನು ಇಂಜಿನಿಯರ್ ಆಗಿ ಬರಲು ಸೀಟ್  ಗಳಿಸಿದ್ದು  ಜಾತಿ ಆಧಾರದ ಮೇಲೆ ಎನ್ನುವ ನೋವು ನನಗು ಇದೆ. ಹೀಗಿರುವಾಗ ಜಾತಿಯ ಕುರಿತಾಗಿ ತತ್ವಜ್ಞಾನಿಯಂತೆ ಲೇಖನವೊಂದನ್ನು ಬರೆದ ಮಾತ್ರಕ್ಕೆ  ಜಾತಿಯ ಕುರಿತಾಗಿ ನಾನು ನೀಡುವ  ವಾದ ಸರಣಿಗೆ  ಬೆಲೆ ಬಂದೀತೆ ? ತಪ್ಪು ಅರ್ಥವಾಗಿದೆ- ಆದರೆ  ಒಂದು ಮಾತು: ಅದಕ್ಕೂ  ಒಂದು ವಿಚಾರವನ್ನು ತಲೆಗೆ  ಹಾಕಿಕೊಂಡಿದ್ದೇನೆ. ಸ್ವಾಮಿಗಳಾಗಿ  ಇರುವ ಮಂದಿ  ಕಾಮ  ಒಂದು ತಪ್ಪು ಎಂದು ಹೇಳುತ್ತಾರೆ.ಆದರೆ ಅವರು ಕಾಮದಿಂದಲೇ ಹುಟ್ಟಿದ್ದಲ್ಲವೇ? ಹುಟ್ಟಿದ, ಇಲ್ಲಿಯತನಕದ ವಿಷಯ ಹೇಗೆ ಇದ್ದರು ಮುಂದಿನ ದಿನಗಳು ಹೇಗೆ ಅನ್ನುವುದನ್ನು ಮಾತ್ರ ನಿರ್ಣಾಯಿಸುವುದು ಸರಿಯನ್ನಿಸುತ್ತದೆ. ಹಾಗಲ್ಲದೆ ಹೋದರೆ ಈ  ಭೂಮಿಯ ಮೇಲೆ ಹುಟ್ಟಿದ ಯಾವ  ವ್ಯಕ್ತಿಯು ಸ್ವಾಮಿಯಾಗಲು  ಅರ್ಹತೆ ಪಡೆಯಲಾರ. ಹಾಗಾಗಿ  ನನ್ನ ವಿಚಾರವು ಮುಂದಿನ  ದಿನಗಳ ಕುರಿತಾಗಿದೆ ಹೊರತು ಇತಿಹಾಸದ ವಿಮರ್ಶೆಯಲ್ಲ; ಇತಿಹಾಸದ ಶುದ್ಧಿಕರಣವು ಅಲ್ಲ.

ಜಾತಿವಾದ ಜಟಿಲವಾಗಿ  ಎಂದೆಂದೂ  ಬಿಡಿಸಲಾರದ ಗಂಟಾಗಿ ಉಳಿಯುವುದಕ್ಕೆ ಮೂಲ ಕಾರಣ ದೇವರನ್ನು ಜಾತಿ ವ್ಯವಸ್ತೆಯಲ್ಲಿ  ಬಂಧಿಸಿರುವುದು. ದೇವರು ಎನ್ನುವುದು  ಮನುಷ್ಯನ ಮನಸ್ಥಿತಿಗೆ  ಸಂಬಂಧಿಸಿದ  ವಿಚಾರ . ಇಂದು ನಾವು ದೇವರನ್ನು ನಾವು ಮೂರ್ತಿಗಳ  ರೂಪದಲ್ಲಿ  ನೋಡುತ್ತೆವೆಯಾದರು  ದೇವರು ಹೀಗೆ ಎಂದು ಹೇಳಲು ಯಾರಿಂದಲೂ  ಸಾಧ್ಯವಿಲ್ಲ. ಕೊನೆಗೂ, ದೇವರು  ಎನ್ನುವುದು ಯಾವುದೋ  ಹೆಸರಲ್ಲಿ, ಯಾವುದೋ  ಮೂರ್ತಿಯ ರೂಪದಲ್ಲಿ ನಮ್ಮ ಬದುಕಿನ ನಂಬಿಕೆಯಲ್ಲಿ ಒಂದಾಗಿ  ಭಾವನೆಯಲ್ಲಿ ವ್ಯಕ್ತವಾಗುತ್ತ  ಕಂಡರೂ ಕಾಣದ  ಹಾಗೆ ಇದ್ದಾನೆ.ಭಾವನತ್ಮಕವಾಗಿರುವ ದೇವರ ಜತೆ ಜಾತಿಯು ಸೇರಿದ್ದರಿಂದ ಅದೊಂದು ಕೇವಲ  ಒಂದು ಮರೆಯುವಂತ ಪದ್ಧತಿಯಾಗಿರದೆ  ಭಾವನೆಯ ಮೇಲೆ ನಡೆಯುವಷ್ಟು  ಸಲೀಸಾದ ದಾರಿ ಕಂಡುಕೊಂಡಿದೆ. ಹೀಗಾಗಿ  ಜಾತಿ ವ್ಯವಸ್ಥೆಯ ಬೇರುಗಳು  ದೇವರ ಹೆಸರಿನ ಮೂಲಕ ಸರ್ವರ ಹೃದಯದಲ್ಲಿ ಅಲಿಂಗನ ಮಾಡಿದೆ. ಜಾತಿ ಕಿತ್ತೊಗೆಯಲು ಭಾವನೆಗಳ ಮೇಲೆ- ವೈಚಾರಿಕವಾದ  ಹಿನ್ನಲೆ, ಭವಿಷ್ಯ ಕುರಿತಾದ ವಿಶ್ಲೇಷಣೆ  ಇತ್ಯಾದಿಗಳಿಂದ  ತಪ್ಪು ಅರಿಯುವಂತೆ ಮಾಡಬೇಕು.

ಜಾತಿ ಮತ್ತು ದೇವರಿಗೂ ಯಾವ ಸಂಬಂಧ  ಅನ್ನುತ್ತಿರಾ ? ನನ್ನ ನಂಬಿಕೆ ಹೀಗಿದೆ: ಹಿಂದೊಂದು ಕಾಲದಲ್ಲಿ ಮನುಷ್ಯರು ಒಂದೊಂದು ಕಡೆ ಸಂಘಟಿತರಾಗಿ  ನೆಲೆ ನಿಲ್ಲಲು ಆರಂಭಿಸಿದರು. ಒಂದೇ ಕಡೆ ನೆಲೆ ನಿಲ್ಲುವ ಕಾರಣದಿಂದ  ಆಹಾರ ಇತ್ಯಾದಿಗಳು ತಾವೇ ಬೆಳೆಸಿಕೊಳ್ಳಬೇಕಾದ  ಅನಿವಾರ್ಯತೆ ಬಂದಿರಬೇಕು.ಜನ ಒಂದೊಂದು ಕೆಲಸದಲ್ಲಿ ಮುಂದುವರೆದರು. ನಾಗರಿಕತೆಗಳು  ಬೆಳೆದವು. ಜನಸಂಖ್ಯೆ  ಬೆಳೆಯಿತು. ತಾನು ದೊಡ್ಡವ ಅನ್ನುವ ವಿಚಾರ ಬೆಳೆದು, ಅಥವಾ ಸಮರ್ಥನೊಬ್ಬ ಉಳಿದವರನ್ನು ಕಾಡು ಪ್ರಾಣಿಗಳಿಂದಲೋ ಅಥವಾ ಇನ್ನೊಂದು  ನೆರೆಯ ನಾಗರಿಕತೆಯ ದಾಳಿಯಿಂದಲೋ ರಕ್ಷಿಸಬೇಕಾಗಿ ಬಂದ ಕಾರಣಗಳಿಂದಾಗಿ  'ರಾಜ' ಎನ್ನುವ ಪರಿಕಲ್ಪನೆ ಬೆಳೆದಿರಬೇಕು. ದಿನದಿಂದ ದಿನಕ್ಕೆ  ವೈಚಾರಿಕ ನಿಲುವುಗಳಲ್ಲೂ ಬದಲಾವಣೆ ಬರಲಾರಂಭಿಸಿತು. ಉತ್ತರವೇ ಕಾಣದ ಪ್ರಾಕೃತಿಕ  ಸನ್ನಿವೇಶಗಳಾದ  ಗುಡುಗು-ಸಿಡಿಲು-ಮಳೆ-ರಾತ್ರಿ-ಹಗಲು ದೇವರು ಎಂದು ಕರೆದರು. ಭಾಷೆ ಹುಟ್ಟಿತ್ತು. ಅಕ್ಷರ ಹುಟ್ಟಿತ್ತು.ವಿಚಾರಗಳ ಬರವಣಿಗೆ,ಗಣಿತ  ಎಲ್ಲವು ಮುಂದೆ ಬೆಳೆದು ಬಂತು. ದುಡಿಯುವ ಜನ ತಮ್ಮದೇ ಕ್ಷೇತ್ರದಲ್ಲಿ ಪರಿಣಿತಿ ಹೊಂದುದ್ದರಿಂದ ಮಡಿಕೆ ಮಾಡಿದವ ಕುಂಬರನಾದ;ಮರಗೆಲಸದವ  ಆಚಾರಿಯಾದ. ದೇವರಿಗೆ ಪೂಜೆ ಒಪ್ಪಿಸುವವರು  ಬ್ರಾಹ್ಮಣರಾದರು. ಹೀಗೆ ಮೂಲದಲ್ಲಿ ಎಲ್ಲವು ಒಂದೇ ಇತ್ತು. ಆದರೆ ವಿಕಾಸ ಹೊಂದುತ್ತಾ ಬಂದ ಮನುಷ್ಯ ಜನಾಂಗ -ಧರ್ಮ-ಅಧರ್ಮ, ನ್ಯಾಯ, ಅನ್ಯಾಯ ಮೊದಲಾದ ವೈಚಾರಿಕ ಪರಿಕಲ್ಪನೆಗಳು  ವೇದಗಳೆಂದು  ಬರೆಯಲ್ಪಟ್ಟವು. ಹೀಗೆ ಮನುಷ್ಯ ಬರೆಯುವಷ್ಟು, ವಿಚಾರವನ್ನು   ಸಂವಹನ ಗಳಿಸುವಷ್ಟು  ಬೆಳೆದ ಮೇಲೆ ಮೇಲು-ಕೀಳು ಎಂಬ ಭಾವನೆಗಳು  ಬರಲಾರಂಭಿಸಿರಬೇಕು. ಮೊದಲು ವೃತಿಗತವಾಗಿದ್ದ ಬದುಕಿನ ಮೇಲು-ಕೀಳು  ನಂತರ ವಂಶವಾಹಿನಿಯಲ್ಲೂ ಕಾಣುವಂತೆ  ಬರಹಗಳು ಬೆಳೆದುಬಂದವು. ದೇವರಿಗೆ ಹತ್ತಿರವಾಗಿ ಪೂಜೆಯಲ್ಲೇ ಇರುತ್ತಿದ್ದ ಅವರು ತಮ್ಮ ವೃತ್ತಿಯನ್ನು  ವೈಭವಿಕರಿಸಿ, ಉಳಿದವರಿಗೆ ಹೆದರಿಕೆ ಹುಟ್ಟುವಂತೆ ಬರೆದು(ಜಾತಿ ವರ್ಗಗಳ ಕುರಿತಾಗಿ),ಕಾಣದ  ಸ್ವರ್ಗ ನರಕಗಳನ್ನು  ಸೃಷ್ಟಿ ಮಾಡಿ,  ಅಸಂಖ್ಯಾತ ದೇವರುಗಳನ್ನು  ಸೃಷ್ಟಿಸಿ ತಮ್ಮ ವಾದವನ್ನು-ಬರಹವನ್ನು ಒಪ್ಪುವಂತೆ ಮಾಡಿದರು. ದೇವರ ಹತ್ತಿರವಿರುವ ಜನರ ಮಾತು, ದೇವರು ಎಂಬ ಶಕ್ತಿಯ ಕುರಿತಾಗಿ ಸಹಜ ಭಾವನಾತ್ಮಕ ಸಂವೇದನೆ  ಹೊಂದಿದ ಪರಿಣಾಮವಾಗಿ ವೇದವಾಕ್ಯವೆಂದು ನಂಬಿದ ಉಳಿದ ವರ್ಗದವರು ಶತಮಾನಗಳ  ಅಂತಹ  ವ್ಯವಸ್ಥೆಯಲ್ಲೇ ಬೆಳೆಯಬೇಕಾಗಿಬಂತು. ಮುಂದಿನ ದಿನಗಳಲ್ಲಿ  ಸಾಧನೆ ಮಾಡಿ ಗಳಿಸಬೇಕಾದ ಸ್ಥಾನವನ್ನು  ಜಾತಿಯ ಹೆಸರಿನಲ್ಲಿ ಪಡೆಯಲಾರಂಭಿಸಿದರು. ಈಗಿನಂತೆ  ಪರೀಕ್ಷೆಗಳು  ಇಲ್ಲದ ಕಾಲದಲ್ಲಿ  ಆಡಳಿತ  ವ್ಯವಸ್ತೆಯಲ್ಲಿ  ಜಾತಿಯೇ ಮಾನದಂಡವಾಗಿ ಉಳಿಯಿತು. ಹೀಗೆ ವಿಕಾಸ ಹೊಂದಿದ ಜಾತಿ, ಇವತ್ತು ಪ್ರತಿಯೊಬ್ಬರ ಹೃದಯದಲ್ಲೂ ಹಾಯಾಗಿ  ಮಲಗಿದೆ. ಇನ್ನು ಕೆಲವರಲ್ಲಿ ಈಗ ನಿದ್ರೆಯಿಂದ ಎಚ್ಚೆತ್ತು  ಕಣ್ಣುಗಳನ್ನು ಉಜ್ಜಿಕೊಳ್ಳುತ್ತಿದ್ದೆ.

ಜಾತಿಯ ವಿಕಾಸ:
ಡಾರ್ವಿನ್ ನ ವಿಕಾಸವಾದವನ್ನು  ನಾವು ಓದಬೇಕು. ಯಾವ ದೇಹದ ಭಾಗವನ್ನು ನಾವು ಬಳಸುತ್ತೇವೆಯೋ ಅದು ಬೆಳೆಯುತ್ತದೆ;ಬಳಸದೆ ಇರುವ ಭಾಗ ತಾನಾಗಿಯೇ ಕಳೆದು ಹೋಗುತ್ತದೆ ಎನ್ನುವುದು ಈ  ವಾದದ  ಸಾರಾಂಶ. ಉದಾಹರಣೆಗೆ- ಒಂದು ಕಾಲದಲ್ಲಿ ಕಾಲುಗಳನ್ನು  ಹೊಂದಿದ್ದ ಹಾವುಗಳು ಬಳಸದೆ ಇದ್ದರಿಂದ  ಕಾಲುಗಳೇ ನಶಿಸಿ ಹೋದವು. ಜಿರಾಫೆಗಳು ಅತಿಯಾಗಿ ತಮ್ಮ ಕತ್ತನ್ನು  ಎತ್ತರದ ಗಿಡಗಳನ್ನು  ತಿನ್ನಲು ಬಳಸಿದ್ದರಿಂದ  ಕತ್ತು  ಉದ್ದಾವಾಗಿದೆ. ಈ ಎಲ್ಲ  ಬದಲಾವಣೆಗಳು ಶತಮಾನದಷ್ಟು  ಕಾಲದಲ್ಲಿ ನಡೆದವುಗಳು. ಆದರೆ ಅದು ನಿಜ ಅನ್ನುವುದಕ್ಕೆ ಕೆಲವು ದೈನಂದಿನ ಉದಾಹರಣೆ  ನಾನೇ ಕೊಡುತ್ತೇನೆ. ನಮ್ಮ ನಡುವೆ ಎಷ್ಟೋ ಮಂದಿ  ಎಡಗೈ  ನಿಪುಣಾರಿದ್ದಾರೆ. ಅವರು ಎಡಗೈಯನ್ನು  ಎಲ್ಲ ಕೆಲಸಗಳಿಗೆ ಮೊದಲಿನಿಂದಲೂ ಬಳಿಸಿದ್ದರಿಂದ  ಎಡಗೈ ಸಬಲವಾಗಿ ಬೆಳೆದಿದೆ. ಇನ್ನೊಂದು ಬಗೆಯ ಬದಲಾವಣೆ -ಜೀವಕೋಶಗಳ ಮೂಲ ಸಂರಚನೆಯ ಬದಲಾವಣೆ (genetic  mutation )ಎಂದು ಹೇಳಬಹುದು.Genetic  ಬದಲಾವಣೆ  ಪ್ರಾಕೃತಿಕ ಪರಿಣಾಮಗಳಿಂದಾಗಿ ಜೀವಿಯ ವಿಕಾಸದ ಸತ್ವ ಎಂದು ಭಾವಿಸಿದರೆ, ದಾರ್ವಿನ್  ವಿಕಾಸವಾದವನ್ನು  ಯಾವದನ್ನು ಬಳಸುತ್ತೇವೆಯೋ-ಇಲ್ಲವೋ ಅನ್ನುವ ಅಂಗಗಳ ಕುರಿತಾಗಿ ವಿಶ್ಲೇಷಿಸಬಹುದು.

ಈ  ವಾದಗಳ ಕುರಿತಾಗಿ ಯಾಕೆ ಬರೆದೆ ಗೊತ್ತೇ? ಕೆಲವು ಮಂದಿ ಬಿಳಿ ಬಣ್ಣದ  ಚರ್ಮದವರಾಗಿ  ಕಂಡರೆ  ಇನ್ನು ಕೆಲವರು ಕಪ್ಪು ಚರ್ಮದವರಾಗಿ  ಬೆಳೆದು ಇರುವುದು ಕಾಣಿಸುತ್ತದೆ. ಇವುಗಳು ಕೂಡ ಜಾತಿಯನ್ನು  ಗುರಿತಿಸಲು ಸಹಾಯವೆಂದು ಕೆಲವರ ಅಂಬೋಣ. ಆದರೆ ಮೂಲತ: ಒಂದೇಯಾಗಿದ್ದ  ಜನ ಬಿಳಿ-ಕಪ್ಪು ಯಾಕೆ ? ಸಹಜ ಪ್ರಶ್ನೆ. ಮೂಲತಃ ದೇವಾಲಯಗಳಲ್ಲಿದ್ದು   ಹಲವಾರು  ಶತಮಾನಗಳಿಂದ  ಸೂರ್ಯನ ಕಿರಣಗಳಿಗೆ  ದೇಹವನ್ನು ಒಡ್ಡರಿದ ಜನ  mutation ನಿಂದಾಗಿ  ಬಿಳಿಯರಾದರು.ಅದೇ ಸೂರ್ಯನ ಪ್ರಕಾರ ಕಿರಣಗಳಿಗೆ  ಉತ್ತರಿಸಿದ  ದೇಹಗಳು  ಸುಟ್ಟು ಕಪ್ಪಾಗಿ ಹೋಯಿತು. ಬುದ್ದಿವನ್ತಿಕೆಯಲ್ಲೂ  ನಾವು ವ್ಯತ್ಯಾಸ  ಗಮನಿಸುತ್ತೇವೆ. ಅದಕ್ಕೆ ಕಾರಣ  ಮೆದುಳಿನ ಬಳಕೆ. ದೇವಾಲಯಗಳಲ್ಲಿ ಕುಳಿತ ಬ್ರಾಹ್ಮಣರು ಕ್ಲಿಷ್ಟ ಗಣಿತ-ವಾದಗಳಲ್ಲಿ ತಮ್ಮ ತಲೆಯನ್ನು ತೊಡಗಿಸಿದ್ದರಿಂದ  ಮೆದುಳು ಸಕತ್ ಆಗಿ ಬೆಳೆಯಿತು  ಆದರೆ ದೇಹ ಅಷ್ಟೊಂದು ಸಬಲ ಇಲ್ಲ. ಅದೇ ಹೊಲಗಳಲ್ಲಿ  ದುಡಿಯುವ  ಜನ ಬೌಧಿಕ ವಿಕಸನಕ್ಕೆ ಅವಕಾಶವೇ ನೀಡಿಲ್ಲ. ಪರಿಣಾಮ ಗಣಿತೀಯವಾದ ಬರಹ ವಾದಗಳು  ಅವರಿಗೆ ಭಾರವಾಗಿಯೇ ಉಳಿದವು. ಈ ರೀತಿಯ ಶತಮಾನಗಳ ವಿಕಸನ  ವಿಚಾರದಿಂದ ಮಾತ್ರವಲ್ಲ- ಹೊರ ದೇಹ ರಚನೆ, ಜ್ಞಾನದ ದೃಷ್ಟಿಯಿಂದಲೂ  ಜನರನ್ನು  ಪಂಗಡಗಳಾಗಿ  ಗುರುತಿಸುವಷ್ಟು ಬದಲಾವಣೆಗಲಾದವು.
---need to continue.

ನಿನ್ನಾಣೆ :ಪ್ರೀತಿಗೋಸ್ಕರ ಬದುಕುತ್ತೇನೆ

ನಾನು ಕೆಲವು ದಿನಗಳ ಹಿಂದೆ ಸುವರ್ಣ ನದಿಯ ತೀರದಲ್ಲಿ ಭೇಟಿಯಾದ love failed  ಮಣಿಪಾಲದ ವಿದ್ಯಾರ್ಥಿಯೊಬ್ಬನ ದುಖಿತ  ಸನ್ನಿವೇಶವನ್ನು  ಕುರಿತಾಗಿ ಕವನ ಬರೆದಿದ್ದೆ. ಆ ಕವನ ಭಾವನಾತ್ಮಕವಾಗಿ ನೋಡಿದಾಗ ನಿನ್ನದೇ story  ಅನಿಸುತ್ತದೆ ಎಂದವರು ಇದ್ದಾರೆ.  ಮನುಷ್ಯ ಲೇಖಕ ಆಗುವುದೇ ಪ್ರೀತಿ ವಿಫಲವಾದಾಗ ಎಂದು ಕೂಡ ಕೆಲವರು ಲೇವಡಿ ಮಾಡಿದ್ದಾರೆ. ಅಲ್ಲ ಅನ್ನುವುದಿದ್ದರೆ ನೀನ್ಯಾಕೆ  ಬರೆಯುತ್ತಿಯಾ ? ಅಂತನೂ  ಕೇಳಿದ್ದಾರೆ ...!

ನಾನು ಯಾಕೆ ಬರೆಯುತ್ತೇನೆ ?
ಪ್ರೀತಿಯ ಬಗ್ಗೆ  ಬರೆದಾಗ ಸಹಜವಾಗಿ  ಪ್ರೀತಿಯಲ್ಲಿ ಬಿದ್ದಿದ್ದಾನೆ  ಅಂದುಕೊಳ್ಳುದು  ಸಹಜ. ಹಾಗೇನು ಇಲ್ಲ. ಆದರೆ ಪ್ರೀತಿಯ ಕುರಿತಾಗಿ ನನಗೊಂದು ಹಂಬಲವಿದೆ;ಗೌರವವಿದೆ ;ಆಕಾಂಕ್ಷೆ ಇದೆ. ನಾನು(ನೀವು ಸಹ) ಬಾಲ್ಯದಿಂದಲೂ ಪ್ರೀತಿಯ ಕುರಿತಾಗಿ ಒಂದಲ್ಲ ಒಂದು ರೀತಿಯ ಘಟನೆಗಳು ನೋಡುತ್ತಾ-ಕೇಳುತ್ತ-ಓದುತ್ತ ಬಂದಿದ್ದೇವೆ. ಮೊದಲಿಂದಲೂ ಪುಸ್ತಕಗಳು;ಯಕ್ಷಗಾನಗಳು ನನ್ನ ನೆಚ್ಚಿನ ವಿಷಯಗಳು. ಪೌರಾಣಿಕ ಪ್ರಸಂಗಗಳಲ್ಲಂತೂ ಪ್ರೀತಿಗೆ  ಕೊಟ್ಟ ಬೆಲೆ  ಅಪಾರವೆನ್ನುವುದಕ್ಕೆ 'ರುಕ್ಮಿಣಿ ಸ್ವಯಂವರ' ಒಂದು ಕತೆಯೇ ಸಾಕು. ಉಳಿದೆಲ್ಲ ಕತೆಗಳಲ್ಲೂ ಜಾತಿ ಭೇದಗಳಿಲ್ಲದೆ ಮದುವೆಗಳು ನಡೆದಿವೆ. (For more information read:Hindu Intercaste Marriages in India by Haripada Chakraborthi) ಪುಸ್ತಕವನ್ನು ಓದಬಹುದು.

ಪೌರಾಣಿಕ ಸತ್ಯಗಳು ಆ ಕಾಲಕ್ಕೆ ಸಂದು ಹೋದವುಗಳು. ಆದರೆ ಅಧುನಿಕ ಜಗತ್ತಿನಲ್ಲಿ ನಮ್ಮ-ನಿಮ್ಮ ನಡೆವುಯುವ ಘಟನೆಗಳು ಹಾಗಲ್ಲ. ಅವು ತಿಳಿದು ಕೊಳ್ಳಲು ಜೀವಂತ ಉದಾಹರಣೆ ಗಳಾದುದ್ದರಿಂದ  ಪ್ರೀತಿಯ ಬಗ್ಗೆಗಿನ ಜಿಜ್ನಾಷೆಗೆ ಉತ್ತರವಾಗಿ ಸಿಗುತ್ತದೆ. ಇಂತ ಕತೆಗಳಲ್ಲಿ  ಸುಧಾ ಮೂರ್ತಿ -ನಾರಾಯಣ ಮೂರ್ತಿ  ಕತೆಯು ಒಂದು. ನಾರಾಯಣ ಮೂರ್ತಿ  ಕೇವಲ 800/-  ಆಸ್ತಿಯ  ಬಡ ಜೀವಿಯಾಗಿದ್ದರಂತೆ ಸುಧಾ ಮೂರ್ತಿಯವರ  ಕಣ್ಣು ಅವರ ಮೇಲೆ ಬೀಳುವ ಮೊದಲು. ಆದರೆ ಇಂದು ಸಾವಿರಾರು ಕೋಟಿಯ ಆಸ್ತಿಯ ಒಡೆಯರು  ಮಾತ್ರವಲ್ಲ; ಪ್ರೀತಿಸುವ (ಪ್ರೀತಿಯಲ್ಲಿ ಬೀಳುವ) ವಯಸ್ಸಿನ  ಎಷ್ಟೋ ಮಂದಿಗೆ  ಎಳೆಯ ವಯಸ್ಸಿನಲ್ಲೇ ಲಕ್ಷಾಂತರ  ರೂಪಾಯಿಯ  ನೌಕರಿ ನೀಡಿದ್ದಾರೆ. ಸನ್ಮಾನ್ಯ  ಮೂರ್ತಿಗಳ   ಪ್ರೀತಿಯ  ಫಲವಾಗಿ ಇಂದು ಒಂದು ಸಂಸ್ಥೆ  ಯುವ ಜನತೆಗೆ; ಅಲ್ಲ ಎಲ್ಲಿಂದಲೋ ಬಡ ಕುಟುಂಬಗಳಿಂದ ಬಂದ ಜನರಿಗೆ ಅನ್ನವು ನೀಡುತಿದೆ ಅಲ್ಲವೇ ?
  
ಇನ್ನು facebook  ಹುಟ್ಟಿದ್ದು ಹೇಗೆ ಅಂತ ನಿಮಗೂ ಗೊತ್ತಲ್ಲವೇ? ಅದರ ಹಿಂದೆಯೂ ಪ್ರೀತಿಯ ವಾಸನೆ ಇದೆ. ORKUT  ಕೂಡ ಅಷ್ಟೇ  ಕಳೆದು ಹೋದ ತನ್ನ(founder) ಗೆಳತಿಯನ್ನು ಹುಡುಕಲು ORKUT  ಬೆಳೆಯಿತು ಎನ್ನುವ  ಕತೆ ಅಂತು ಇದೆ. Apple  founder   Steve Jobs ಹಿಂದೆಯೂ ಒಂದು ಪ್ರೀತಿಯ ಕತೆ ಇದೆ. Albert Einstein ಕೂಡ ಈ  ವಿಷಯದಲ್ಲಿ ಕಡಿಮೆ ಏನಲ್ಲ. ಹೀಗೆ ಪ್ರೀತಿ ಒಂದು ಎಲ್ಲರ ಬದುಕಿನ ಹಿಂದೆ, ಸಾಧನೆಯ ಹಿಂದೆ ಇದ್ದೆ ಇದೆ. ಪ್ರೀತಿಯ ಕತೆಗಳು  ವಿಜ್ಞಾನ  ಓದುವರಿಗೆ  ಅದು ಅವರ ವಯಕ್ತಿಕ ವಿಷಯವೆಂದು  ಪರಿಗಣಿಸಿ  ತುಂಬಾ negligence ಮಾಡುತ್ತೇವೆ. ಆದರೆ ವಿಜ್ನಾನಿಯು (ಯಾವುದೇ ಸಾಧನೆಯ ರುವಾರಿಯು) ಮನುಷ್ಯ ಅನ್ನುವುದನ್ನು ಮಾತ್ರ ಮರೆಯಬಾರದು. 

ಪ್ರೀತಿಯಿಂದಲೇ ತಾನು ಮೇಲೆ ಬಂದೆ ಅನ್ನುವ ವ್ಯಕ್ತಿಗಳ ಸಾಲು ಕೂಡ ದೊಡ್ಡದೇ! ವೀರಪ್ಪ ಮೊಯ್ಲಿಯವರು  ತನ್ನ ಮಾವನ ಮಗಳನ್ನು ಪ್ರೀತಿಸಿ ಮದುವೆ ಆಗಿದ್ದರಂತೆ-ಆ ಮಾತನ್ನು ಒಂದು ರೀತಿಯ ಜೋಕಾಗಿ ಉಜಿರೆಯಲ್ಲಿ  ನಡೆದ ತುಳು ಸಮ್ಮೇಳನದಲ್ಲಿ ಹೇಳಿದ್ದರು. ಮಾಲ್ಗುಡಿ ಕತೆಗಗಳ ಜನಕ ಆರ್.ಕೆ .ನಾರಾಯಣ್  ಒಮ್ಮೆ ತಮಿಳುನಾಡಿನಲ್ಲಿ ತಮ್ಮ ಅಕ್ಕಳ ಮನೆ ಬದಲಾಯಿಸುತ್ತಿದಾಗ  ಬಾವಿಯಲ್ಲಿ  ನೀರು ಸೇದುತಿದ್ದ  ಹುಡುಗಿಯನ್ನು ನೋಡಿ ಮೋಹಗೊಂಡು  ಮದುವೆಯನ್ನು ಆದರಂತೆ. ನಮ್ಮೆಲ್ಲರ  ನೆಚ್ಚಿನ ನಟ ವಿಷ್ಣು ವರ್ಧನ್  ಒಮ್ಮೆ  ಬೆಂಗಳೂರಿನ  ಪುರಭವನದಲ್ಲಿ ನಡೆಯುತ್ತಿದ ಕಾರ್ಯಕ್ರಮಕ್ಕೆ ಪ್ರೇಕ್ಷಕರಾಗಿ  ಹೋಗಿದ್ದರಂತೆ. ಹಾಡುತಿದ್ದ  ಭಾರತಿಯನ್ನು ಕಂಡು  ನಾನು ಅವಳನ್ನೇ ಮದುವೆಯಾಗುತ್ತೇನೆ  ಎಂದು ಗೆಳೆಯರಿಗೆಲ್ಲ ಹೇಳಿದ್ದರಂತೆ. ವಿಷ್ಣುವರ್ಧನ  ಒಳ್ಳೆಯ ಸಿನಿಮಾ  ಮಾಡಿದ್ದೂ ಮಾತ್ರವಲ್ಲ; ಇಡಿ ತಮ್ಮ ಬಣ್ಣದ ಜೀವನದಲ್ಲಿಯೂ  ಹೆಣ್ಣಿನ ಕುರಿತಾಗಿ ಅತ್ಯಂತ ಗೌರವಯುತವಾಗಿ ನಡೆದುಕೊಂಡ  ಏಕೈಕ ನಟನಂತೆ. ಇನ್ನು ಸ್ಯಾಮ್  ಪಿಟ್ರೋಡಾ  ಹೆಸರು ನೀವು ಕೇಳಿರಬೇಕು. ಇತ್ತೀಚಿನ  ರಾಷ್ಟ್ರಪತಿ ಆಯ್ಕೆಯ ಸಂದರ್ಭದಲ್ಲಿ  ಅರ್ಹ ಅಭ್ಯರ್ಥಿಗಳಲ್ಲಿ  ಅವರು ಒಬ್ಬರಾಗಿದ್ದರು. ಅವರು ವಿದ್ಯಾಭ್ಯಾಸ  ಮುಗಿಸಿ ಅಮೇರಿಕಾದಲ್ಲಿ ದುಡಿಯುತ್ತಿದ್ದರು. ಆದರೆ  ಗುಜರಾತನಲ್ಲಿದ್ದ  ತನ್ನ ಪ್ರಿಯತಮೆಗೆ  ಸರಿಯಾದ ದೂರವಾಣಿ ವ್ಯವಸ್ತೆ ಇಲ್ಲದಿರುವುದರಿಂದ  ಫೋನ್  ಮೂಲಕ  ಭೇಟಿಯಾಗುವುದು  ಅಸಾಧ್ಯವಾಗುತ್ತಿತ್ತಂತೆ. ಇದರಿಂದಾಗಿ  ಭಾರತೀಯ ದೂರ ಸಂಪರ್ಕ ವ್ಯವಸ್ತೆಯ  ದಿಕ್ಕನ್ನು ಬದಲಾಯಿಸಲು 80ರ ದಶಕದಲ್ಲಿ ಭಾರತೀಯ ದೂರಸಂಪರ್ಕ ಇಲಾಖೆಯಲ್ಲಿ ಸೇರಿದರಂತೆ. ಹೀಗೆ ಬರೆಯುತ್ತ ಹೋದರೆ ಸಾವಿರಾರು ಕತೆಗಳು ಸಿಗುತ್ತವೆ.


ನಾವು ಏನು ಹೇಳಿದರು  ಮನುಷ್ಯನ ಕರ್ತವ್ಯದ ಮೇಲೆ; ಆಸಕ್ತಿಯ ಮೇಲೆ;ಸೃಜನಶೀಲತೆಯ  ಮೇಲೆ  ಪ್ರೀತಿಯ ನೆರಳು ಇದ್ದೆ ಇದೆ. ತಮ್ಮ ಪ್ರೀತಿಯ ಉಳುವಿಗಾಗಿ ಎಲ್ಲರು ಶ್ರಮ ವಹಿಸುತ್ತರಾದರು  ಕೆಲವೊಮ್ಮೆ  ಪರರಿಗೆ ಆಗಬಹುದಾದ ನೋವು ಅರಿಯುವುದಿಲ್ಲ ಅನಿಸುತ್ತದೆ. ಇಂತದೊಂದು  ಕತೆಗಳಲ್ಲಿ ನೆಹರು  ವೈಸರಾಯರ ಹೆಂಡತಿಯ ಮೇಲಿನ ಪ್ರೀತಿಗಾಗಿ ಭಾರತ-ಪಾಕಿಸ್ತಾನದ ವಿಭಜನೆಗೆ ಕಾರಣರಾದರು.ದೇಶಕ್ಕೂ ದುರಂತ ತಂದಿಟ್ಟರು.  ಯಾವೋದು ಒಂದು ಪತ್ರಿಕೆಯಲ್ಲಿ ಓದಿದ ನೆನಪು- ತನ್ನ ಪ್ರೀಯತಮೆಗಾಗಿ  ಮೊಬೈಲ್ ಕೊಡಿಸಲು ಹಣಕ್ಕಾಗಿ  ಯಾರದೋ ಬೈಕ್  ಕದ್ದು ಪೋಲಿಸ್  ಅಥಿತಿಯಾದನಂತೆ. ಪ್ರೀತಿ ಅಪರಾಧವಲ್ಲ; ಆದರೆ ಪ್ರೀತಿ ಅನ್ನುವುದು ಸ್ವಲ್ಪ ಮಾನವ ಸಹಜ ವಿವೇಚನೆಗೆ ಒಳ ಪಟ್ಟಿರಬೇಕು ಅಷ್ಟೇ.


ಹೀಗೆ ನನ್ನ ಮನಸ್ಸಿನಲ್ಲಿ ಪ್ರೀತಿಯ ಕುರಿತಾಗಿ ಆರಾಧನಾ ಭಾವವೊಂದು  ಮೂಡಿದೆ.  ಪ್ರೀತಿಯ ಕುರಿತಾಗಿ -ಅದು ಒಂದು ತಪ್ಪು ವಿಷಯವೆಂದು ಜನ ಮಾತನಾಡುತ್ತರಾದರು- ಅದಕ್ಕೆ ಕಾರಣ ಪ್ರೀತಿಯೇ ತಪ್ಪು ಅಂತ ಅಲ್ಲ. ಯಾರಾದರು ಪ್ರೀತಿಸಿ ಮದುವೆಯಾದರೆ -ಎಲ್ಲಿ ಸಂಪ್ರದಾಯ ಮುರಿದು  ಜಾತಿ-ಗಿತಿ  ಕೆಟ್ಟು ಹೋದಿತು ಅನ್ನುವ ಭಯ. ಹುಡುಗ-ಹುಡುಗಿಯೇ ನಿರ್ಧರಿಸಿ  ಮದುವೆಯಾದರೆ  ಎಲ್ಲಿ ಜಾತಕಕ್ಕೆ ಬೆಲೆ ಬಂದಿತು? ಅವರಿಗೆಲ್ಲಿ  ನೌಕರಿ ? ಜ್ಯೋತಿಷಿಗಳೆಂದು ನಾಮ ಎಳೆದು ಕೊಂಡವರಿಗೆ ಯಾರು ಬೆಲೆ ಕೊಡ್ತಾರೆ ? ಜೊತೆಗೆ ವರದಕ್ಷಿಣೆಯಿಂದ ಬರಬೇಕಾದ  ಹಣ-ಕಾರು  ಎಲ್ಲ ತಪ್ಪಿ ಹೋದರೆ ಏನು ಮಾಡುದು ?  ಒಟ್ಟಾರೆ  ಹಿರಿಯರ ಕಪಿ ಮುಷ್ಟಿಯಲ್ಲಿ  ಎಷ್ಟೋ ಜನ ತಮ್ಮ  ಪ್ರೀತಿಯಿಂದ ದೂರ ಸರಿದವರಿದ್ದಾರೆ.
 
ನಾನು ಹೇಳುವುದಿಷ್ಟೇ : ನಿವೇನಾದರು ಪ್ರೀತಿಯಲ್ಲಿದ್ದಿರೆ -ಇವತ್ತೇ  ಆಣೆ  ಮಾಡಿ ಪ್ರೀತಿಗೊಸ್ಕವೇ ಬದುಕುತ್ತೇನೆ ಎಂದು. ನಿಮ್ಮ ಪ್ರೀತಿ ನಿಮ್ಮದೇ ಆಗಿರಲಿ. ತಂದೆ-ತಾಯಿ, ಬಂಧುಗಳಿಂದ  ಆತ್ಮ ವಿಶ್ವಾಸಗಳಿಸಿ. ಆದರೆ ಪ್ರೀತಿಗಾಗಿ ಮಾನವೀಯ ಮೌಲ್ಯಗಳನ್ನು ಧಿಕ್ಕರಿಸಬೇಡಿ.ಪ್ರೀತಿಯಿಂದ-ಉತ್ಸಾಹ, ಉತ್ಸಾಹದಿಂದ-ಕಾರ್ಯ ಸಾಧನೆಯಗುತ್ತದೆ ಹೊರತು  ಕೇವಲ ಉತ್ಸಹ ರಹಿತ ಶಿಕ್ಷಣದಿಂದ  ಡಿಗ್ರಿಗಳು ಸಿಗುತ್ತವೆ  ವಿನಾ  ಸಾಧನೆಯಲ್ಲ.