Saturday, December 8, 2012

ನಿನ್ನಾಣೆ :ಪ್ರೀತಿಗೋಸ್ಕರ ಬದುಕುತ್ತೇನೆ

ನಾನು ಕೆಲವು ದಿನಗಳ ಹಿಂದೆ ಸುವರ್ಣ ನದಿಯ ತೀರದಲ್ಲಿ ಭೇಟಿಯಾದ love failed  ಮಣಿಪಾಲದ ವಿದ್ಯಾರ್ಥಿಯೊಬ್ಬನ ದುಖಿತ  ಸನ್ನಿವೇಶವನ್ನು  ಕುರಿತಾಗಿ ಕವನ ಬರೆದಿದ್ದೆ. ಆ ಕವನ ಭಾವನಾತ್ಮಕವಾಗಿ ನೋಡಿದಾಗ ನಿನ್ನದೇ story  ಅನಿಸುತ್ತದೆ ಎಂದವರು ಇದ್ದಾರೆ.  ಮನುಷ್ಯ ಲೇಖಕ ಆಗುವುದೇ ಪ್ರೀತಿ ವಿಫಲವಾದಾಗ ಎಂದು ಕೂಡ ಕೆಲವರು ಲೇವಡಿ ಮಾಡಿದ್ದಾರೆ. ಅಲ್ಲ ಅನ್ನುವುದಿದ್ದರೆ ನೀನ್ಯಾಕೆ  ಬರೆಯುತ್ತಿಯಾ ? ಅಂತನೂ  ಕೇಳಿದ್ದಾರೆ ...!

ನಾನು ಯಾಕೆ ಬರೆಯುತ್ತೇನೆ ?
ಪ್ರೀತಿಯ ಬಗ್ಗೆ  ಬರೆದಾಗ ಸಹಜವಾಗಿ  ಪ್ರೀತಿಯಲ್ಲಿ ಬಿದ್ದಿದ್ದಾನೆ  ಅಂದುಕೊಳ್ಳುದು  ಸಹಜ. ಹಾಗೇನು ಇಲ್ಲ. ಆದರೆ ಪ್ರೀತಿಯ ಕುರಿತಾಗಿ ನನಗೊಂದು ಹಂಬಲವಿದೆ;ಗೌರವವಿದೆ ;ಆಕಾಂಕ್ಷೆ ಇದೆ. ನಾನು(ನೀವು ಸಹ) ಬಾಲ್ಯದಿಂದಲೂ ಪ್ರೀತಿಯ ಕುರಿತಾಗಿ ಒಂದಲ್ಲ ಒಂದು ರೀತಿಯ ಘಟನೆಗಳು ನೋಡುತ್ತಾ-ಕೇಳುತ್ತ-ಓದುತ್ತ ಬಂದಿದ್ದೇವೆ. ಮೊದಲಿಂದಲೂ ಪುಸ್ತಕಗಳು;ಯಕ್ಷಗಾನಗಳು ನನ್ನ ನೆಚ್ಚಿನ ವಿಷಯಗಳು. ಪೌರಾಣಿಕ ಪ್ರಸಂಗಗಳಲ್ಲಂತೂ ಪ್ರೀತಿಗೆ  ಕೊಟ್ಟ ಬೆಲೆ  ಅಪಾರವೆನ್ನುವುದಕ್ಕೆ 'ರುಕ್ಮಿಣಿ ಸ್ವಯಂವರ' ಒಂದು ಕತೆಯೇ ಸಾಕು. ಉಳಿದೆಲ್ಲ ಕತೆಗಳಲ್ಲೂ ಜಾತಿ ಭೇದಗಳಿಲ್ಲದೆ ಮದುವೆಗಳು ನಡೆದಿವೆ. (For more information read:Hindu Intercaste Marriages in India by Haripada Chakraborthi) ಪುಸ್ತಕವನ್ನು ಓದಬಹುದು.

ಪೌರಾಣಿಕ ಸತ್ಯಗಳು ಆ ಕಾಲಕ್ಕೆ ಸಂದು ಹೋದವುಗಳು. ಆದರೆ ಅಧುನಿಕ ಜಗತ್ತಿನಲ್ಲಿ ನಮ್ಮ-ನಿಮ್ಮ ನಡೆವುಯುವ ಘಟನೆಗಳು ಹಾಗಲ್ಲ. ಅವು ತಿಳಿದು ಕೊಳ್ಳಲು ಜೀವಂತ ಉದಾಹರಣೆ ಗಳಾದುದ್ದರಿಂದ  ಪ್ರೀತಿಯ ಬಗ್ಗೆಗಿನ ಜಿಜ್ನಾಷೆಗೆ ಉತ್ತರವಾಗಿ ಸಿಗುತ್ತದೆ. ಇಂತ ಕತೆಗಳಲ್ಲಿ  ಸುಧಾ ಮೂರ್ತಿ -ನಾರಾಯಣ ಮೂರ್ತಿ  ಕತೆಯು ಒಂದು. ನಾರಾಯಣ ಮೂರ್ತಿ  ಕೇವಲ 800/-  ಆಸ್ತಿಯ  ಬಡ ಜೀವಿಯಾಗಿದ್ದರಂತೆ ಸುಧಾ ಮೂರ್ತಿಯವರ  ಕಣ್ಣು ಅವರ ಮೇಲೆ ಬೀಳುವ ಮೊದಲು. ಆದರೆ ಇಂದು ಸಾವಿರಾರು ಕೋಟಿಯ ಆಸ್ತಿಯ ಒಡೆಯರು  ಮಾತ್ರವಲ್ಲ; ಪ್ರೀತಿಸುವ (ಪ್ರೀತಿಯಲ್ಲಿ ಬೀಳುವ) ವಯಸ್ಸಿನ  ಎಷ್ಟೋ ಮಂದಿಗೆ  ಎಳೆಯ ವಯಸ್ಸಿನಲ್ಲೇ ಲಕ್ಷಾಂತರ  ರೂಪಾಯಿಯ  ನೌಕರಿ ನೀಡಿದ್ದಾರೆ. ಸನ್ಮಾನ್ಯ  ಮೂರ್ತಿಗಳ   ಪ್ರೀತಿಯ  ಫಲವಾಗಿ ಇಂದು ಒಂದು ಸಂಸ್ಥೆ  ಯುವ ಜನತೆಗೆ; ಅಲ್ಲ ಎಲ್ಲಿಂದಲೋ ಬಡ ಕುಟುಂಬಗಳಿಂದ ಬಂದ ಜನರಿಗೆ ಅನ್ನವು ನೀಡುತಿದೆ ಅಲ್ಲವೇ ?
  
ಇನ್ನು facebook  ಹುಟ್ಟಿದ್ದು ಹೇಗೆ ಅಂತ ನಿಮಗೂ ಗೊತ್ತಲ್ಲವೇ? ಅದರ ಹಿಂದೆಯೂ ಪ್ರೀತಿಯ ವಾಸನೆ ಇದೆ. ORKUT  ಕೂಡ ಅಷ್ಟೇ  ಕಳೆದು ಹೋದ ತನ್ನ(founder) ಗೆಳತಿಯನ್ನು ಹುಡುಕಲು ORKUT  ಬೆಳೆಯಿತು ಎನ್ನುವ  ಕತೆ ಅಂತು ಇದೆ. Apple  founder   Steve Jobs ಹಿಂದೆಯೂ ಒಂದು ಪ್ರೀತಿಯ ಕತೆ ಇದೆ. Albert Einstein ಕೂಡ ಈ  ವಿಷಯದಲ್ಲಿ ಕಡಿಮೆ ಏನಲ್ಲ. ಹೀಗೆ ಪ್ರೀತಿ ಒಂದು ಎಲ್ಲರ ಬದುಕಿನ ಹಿಂದೆ, ಸಾಧನೆಯ ಹಿಂದೆ ಇದ್ದೆ ಇದೆ. ಪ್ರೀತಿಯ ಕತೆಗಳು  ವಿಜ್ಞಾನ  ಓದುವರಿಗೆ  ಅದು ಅವರ ವಯಕ್ತಿಕ ವಿಷಯವೆಂದು  ಪರಿಗಣಿಸಿ  ತುಂಬಾ negligence ಮಾಡುತ್ತೇವೆ. ಆದರೆ ವಿಜ್ನಾನಿಯು (ಯಾವುದೇ ಸಾಧನೆಯ ರುವಾರಿಯು) ಮನುಷ್ಯ ಅನ್ನುವುದನ್ನು ಮಾತ್ರ ಮರೆಯಬಾರದು. 

ಪ್ರೀತಿಯಿಂದಲೇ ತಾನು ಮೇಲೆ ಬಂದೆ ಅನ್ನುವ ವ್ಯಕ್ತಿಗಳ ಸಾಲು ಕೂಡ ದೊಡ್ಡದೇ! ವೀರಪ್ಪ ಮೊಯ್ಲಿಯವರು  ತನ್ನ ಮಾವನ ಮಗಳನ್ನು ಪ್ರೀತಿಸಿ ಮದುವೆ ಆಗಿದ್ದರಂತೆ-ಆ ಮಾತನ್ನು ಒಂದು ರೀತಿಯ ಜೋಕಾಗಿ ಉಜಿರೆಯಲ್ಲಿ  ನಡೆದ ತುಳು ಸಮ್ಮೇಳನದಲ್ಲಿ ಹೇಳಿದ್ದರು. ಮಾಲ್ಗುಡಿ ಕತೆಗಗಳ ಜನಕ ಆರ್.ಕೆ .ನಾರಾಯಣ್  ಒಮ್ಮೆ ತಮಿಳುನಾಡಿನಲ್ಲಿ ತಮ್ಮ ಅಕ್ಕಳ ಮನೆ ಬದಲಾಯಿಸುತ್ತಿದಾಗ  ಬಾವಿಯಲ್ಲಿ  ನೀರು ಸೇದುತಿದ್ದ  ಹುಡುಗಿಯನ್ನು ನೋಡಿ ಮೋಹಗೊಂಡು  ಮದುವೆಯನ್ನು ಆದರಂತೆ. ನಮ್ಮೆಲ್ಲರ  ನೆಚ್ಚಿನ ನಟ ವಿಷ್ಣು ವರ್ಧನ್  ಒಮ್ಮೆ  ಬೆಂಗಳೂರಿನ  ಪುರಭವನದಲ್ಲಿ ನಡೆಯುತ್ತಿದ ಕಾರ್ಯಕ್ರಮಕ್ಕೆ ಪ್ರೇಕ್ಷಕರಾಗಿ  ಹೋಗಿದ್ದರಂತೆ. ಹಾಡುತಿದ್ದ  ಭಾರತಿಯನ್ನು ಕಂಡು  ನಾನು ಅವಳನ್ನೇ ಮದುವೆಯಾಗುತ್ತೇನೆ  ಎಂದು ಗೆಳೆಯರಿಗೆಲ್ಲ ಹೇಳಿದ್ದರಂತೆ. ವಿಷ್ಣುವರ್ಧನ  ಒಳ್ಳೆಯ ಸಿನಿಮಾ  ಮಾಡಿದ್ದೂ ಮಾತ್ರವಲ್ಲ; ಇಡಿ ತಮ್ಮ ಬಣ್ಣದ ಜೀವನದಲ್ಲಿಯೂ  ಹೆಣ್ಣಿನ ಕುರಿತಾಗಿ ಅತ್ಯಂತ ಗೌರವಯುತವಾಗಿ ನಡೆದುಕೊಂಡ  ಏಕೈಕ ನಟನಂತೆ. ಇನ್ನು ಸ್ಯಾಮ್  ಪಿಟ್ರೋಡಾ  ಹೆಸರು ನೀವು ಕೇಳಿರಬೇಕು. ಇತ್ತೀಚಿನ  ರಾಷ್ಟ್ರಪತಿ ಆಯ್ಕೆಯ ಸಂದರ್ಭದಲ್ಲಿ  ಅರ್ಹ ಅಭ್ಯರ್ಥಿಗಳಲ್ಲಿ  ಅವರು ಒಬ್ಬರಾಗಿದ್ದರು. ಅವರು ವಿದ್ಯಾಭ್ಯಾಸ  ಮುಗಿಸಿ ಅಮೇರಿಕಾದಲ್ಲಿ ದುಡಿಯುತ್ತಿದ್ದರು. ಆದರೆ  ಗುಜರಾತನಲ್ಲಿದ್ದ  ತನ್ನ ಪ್ರಿಯತಮೆಗೆ  ಸರಿಯಾದ ದೂರವಾಣಿ ವ್ಯವಸ್ತೆ ಇಲ್ಲದಿರುವುದರಿಂದ  ಫೋನ್  ಮೂಲಕ  ಭೇಟಿಯಾಗುವುದು  ಅಸಾಧ್ಯವಾಗುತ್ತಿತ್ತಂತೆ. ಇದರಿಂದಾಗಿ  ಭಾರತೀಯ ದೂರ ಸಂಪರ್ಕ ವ್ಯವಸ್ತೆಯ  ದಿಕ್ಕನ್ನು ಬದಲಾಯಿಸಲು 80ರ ದಶಕದಲ್ಲಿ ಭಾರತೀಯ ದೂರಸಂಪರ್ಕ ಇಲಾಖೆಯಲ್ಲಿ ಸೇರಿದರಂತೆ. ಹೀಗೆ ಬರೆಯುತ್ತ ಹೋದರೆ ಸಾವಿರಾರು ಕತೆಗಳು ಸಿಗುತ್ತವೆ.


ನಾವು ಏನು ಹೇಳಿದರು  ಮನುಷ್ಯನ ಕರ್ತವ್ಯದ ಮೇಲೆ; ಆಸಕ್ತಿಯ ಮೇಲೆ;ಸೃಜನಶೀಲತೆಯ  ಮೇಲೆ  ಪ್ರೀತಿಯ ನೆರಳು ಇದ್ದೆ ಇದೆ. ತಮ್ಮ ಪ್ರೀತಿಯ ಉಳುವಿಗಾಗಿ ಎಲ್ಲರು ಶ್ರಮ ವಹಿಸುತ್ತರಾದರು  ಕೆಲವೊಮ್ಮೆ  ಪರರಿಗೆ ಆಗಬಹುದಾದ ನೋವು ಅರಿಯುವುದಿಲ್ಲ ಅನಿಸುತ್ತದೆ. ಇಂತದೊಂದು  ಕತೆಗಳಲ್ಲಿ ನೆಹರು  ವೈಸರಾಯರ ಹೆಂಡತಿಯ ಮೇಲಿನ ಪ್ರೀತಿಗಾಗಿ ಭಾರತ-ಪಾಕಿಸ್ತಾನದ ವಿಭಜನೆಗೆ ಕಾರಣರಾದರು.ದೇಶಕ್ಕೂ ದುರಂತ ತಂದಿಟ್ಟರು.  ಯಾವೋದು ಒಂದು ಪತ್ರಿಕೆಯಲ್ಲಿ ಓದಿದ ನೆನಪು- ತನ್ನ ಪ್ರೀಯತಮೆಗಾಗಿ  ಮೊಬೈಲ್ ಕೊಡಿಸಲು ಹಣಕ್ಕಾಗಿ  ಯಾರದೋ ಬೈಕ್  ಕದ್ದು ಪೋಲಿಸ್  ಅಥಿತಿಯಾದನಂತೆ. ಪ್ರೀತಿ ಅಪರಾಧವಲ್ಲ; ಆದರೆ ಪ್ರೀತಿ ಅನ್ನುವುದು ಸ್ವಲ್ಪ ಮಾನವ ಸಹಜ ವಿವೇಚನೆಗೆ ಒಳ ಪಟ್ಟಿರಬೇಕು ಅಷ್ಟೇ.


ಹೀಗೆ ನನ್ನ ಮನಸ್ಸಿನಲ್ಲಿ ಪ್ರೀತಿಯ ಕುರಿತಾಗಿ ಆರಾಧನಾ ಭಾವವೊಂದು  ಮೂಡಿದೆ.  ಪ್ರೀತಿಯ ಕುರಿತಾಗಿ -ಅದು ಒಂದು ತಪ್ಪು ವಿಷಯವೆಂದು ಜನ ಮಾತನಾಡುತ್ತರಾದರು- ಅದಕ್ಕೆ ಕಾರಣ ಪ್ರೀತಿಯೇ ತಪ್ಪು ಅಂತ ಅಲ್ಲ. ಯಾರಾದರು ಪ್ರೀತಿಸಿ ಮದುವೆಯಾದರೆ -ಎಲ್ಲಿ ಸಂಪ್ರದಾಯ ಮುರಿದು  ಜಾತಿ-ಗಿತಿ  ಕೆಟ್ಟು ಹೋದಿತು ಅನ್ನುವ ಭಯ. ಹುಡುಗ-ಹುಡುಗಿಯೇ ನಿರ್ಧರಿಸಿ  ಮದುವೆಯಾದರೆ  ಎಲ್ಲಿ ಜಾತಕಕ್ಕೆ ಬೆಲೆ ಬಂದಿತು? ಅವರಿಗೆಲ್ಲಿ  ನೌಕರಿ ? ಜ್ಯೋತಿಷಿಗಳೆಂದು ನಾಮ ಎಳೆದು ಕೊಂಡವರಿಗೆ ಯಾರು ಬೆಲೆ ಕೊಡ್ತಾರೆ ? ಜೊತೆಗೆ ವರದಕ್ಷಿಣೆಯಿಂದ ಬರಬೇಕಾದ  ಹಣ-ಕಾರು  ಎಲ್ಲ ತಪ್ಪಿ ಹೋದರೆ ಏನು ಮಾಡುದು ?  ಒಟ್ಟಾರೆ  ಹಿರಿಯರ ಕಪಿ ಮುಷ್ಟಿಯಲ್ಲಿ  ಎಷ್ಟೋ ಜನ ತಮ್ಮ  ಪ್ರೀತಿಯಿಂದ ದೂರ ಸರಿದವರಿದ್ದಾರೆ.
 
ನಾನು ಹೇಳುವುದಿಷ್ಟೇ : ನಿವೇನಾದರು ಪ್ರೀತಿಯಲ್ಲಿದ್ದಿರೆ -ಇವತ್ತೇ  ಆಣೆ  ಮಾಡಿ ಪ್ರೀತಿಗೊಸ್ಕವೇ ಬದುಕುತ್ತೇನೆ ಎಂದು. ನಿಮ್ಮ ಪ್ರೀತಿ ನಿಮ್ಮದೇ ಆಗಿರಲಿ. ತಂದೆ-ತಾಯಿ, ಬಂಧುಗಳಿಂದ  ಆತ್ಮ ವಿಶ್ವಾಸಗಳಿಸಿ. ಆದರೆ ಪ್ರೀತಿಗಾಗಿ ಮಾನವೀಯ ಮೌಲ್ಯಗಳನ್ನು ಧಿಕ್ಕರಿಸಬೇಡಿ.ಪ್ರೀತಿಯಿಂದ-ಉತ್ಸಾಹ, ಉತ್ಸಾಹದಿಂದ-ಕಾರ್ಯ ಸಾಧನೆಯಗುತ್ತದೆ ಹೊರತು  ಕೇವಲ ಉತ್ಸಹ ರಹಿತ ಶಿಕ್ಷಣದಿಂದ  ಡಿಗ್ರಿಗಳು ಸಿಗುತ್ತವೆ  ವಿನಾ  ಸಾಧನೆಯಲ್ಲ.

3 comments:

  1. Hi Sir,
    You have a great blog and Its Good information sir,,,,,

    ReplyDelete
  2. HI Sir,
    You have a great blog and Good Information Sir.

    ReplyDelete
  3. Hi Sir,
    You have a great blog and good Information sir.

    ReplyDelete