Wednesday, October 10, 2012

ಆಸ್ಪತ್ರೆಯಲ್ಲಿ ಜಾತಿಯಿಲ್ಲದ ಆಂಟಿ, ಮದುವೆಯಲ್ಲಿ ?

ಇದೊಂದು ಕಾಲ್ಪನಿಕ ಕತೆ . ಪಾತ್ರಗಳ ಹೆಸರು ಕೂಡ ಕೇವಲ ಕಾಲ್ಪನಿಕ.ಯಾರು ಕೂಡ ತಮ್ಮ ಹೆಸರು ಬಳಸಲಾಗಿದೆ ಎಂದು ನೊಂದು ಕೊಳ್ಳಬಾರದು. ತಮ್ಮ ಸಲಹೆ -ಸೂಚನೆಗಳೇನಿದ್ದರು ನನ್ನ ಗಮನಕ್ಕೆ ತರಬಹುದು. ನಾನು ಗೂಗಲ್ transliterate ಬಳಿಸಿ ಕನ್ನಡ ಬರೆಯುತ್ತಿದ್ದೇನೆ. ಅಕ್ಷರ ತಪ್ಪುಗಳಿಗೆ ಕ್ಷಮೆ ಇರಲಿ.

ಕತೆ ಹೀಗಿದೆ:
'frendz, my mom admitted in kims.urgently needed o+ve blood 10 bottles.Pleeeease help....meenakshi'   9:57 am  sender +91-99168xxxxx .

Lab ನಲ್ಲಿ VHDL programming ಮಾಡುತ್ತಿದ್ದಾಗ ನಮ್ಮ ಮೊಬೈಲ್ ಗಳಿಗೆ ಇಂತದೊಂದು sms ಬಂದು ಸೇರಿತ್ತು. lab ನಲ್ಲಿ ಮೊಬೈಲ್ ಗಳು ತರುವುದು ನಿಯಮ ಬಾಹಿರವಾದುದ್ದರಿಂದ  ಕಂಪ್ಯೂಟರ್ ಗಳ ಮರೆಯಲ್ಲಿ sms  ಓದಿದ್ದೆವು. ಮೀನಾಕ್ಷಿ ನಂಬರ್ ನನ್ನ ಹತ್ತಿರವಿಲ್ಲದಿದ್ದರು sms ನಲ್ಲಿ 'ಮೀನಾಕ್ಷಿ' ಎಂದು ಸೇರಿಸಿದ್ದರಿಂದ, ನಮ್ಮ ಕ್ಲಾಸ್-ಮೆಟ್ ಮಾಡಿದ sms  ಎಂದು ಕುರುಹು ನೀಡಿತ್ತು.

ಮೀನಾಕ್ಷಿ , ನಮ್ಮ  ಕ್ಲಾಸ್ ನ ಸುಂದರ ಹಾಗು ಎಲ್ಲರೊಂದಿಗೂ ಸಲುಗೆಯಿಂದ ಹೊಂದುಕೊಂಡು ಹೋಗುವ ಕೂಲ್ ಹುಡುಗಿ. ಒಮ್ಮೆ ನೋಡಿದರೆ  ಮತ್ತೊಮ್ಮೆ ನೋಡಬೇಕು, ಮತ್ತೊಮ್ಮೆ ಮಾತನಾಡಬೇಕು ಅನ್ನಿಸುವಂತ ಆಕರ್ಷಣೆಯುಳ್ಳ ಹುಡುಗಿ. ನಾನೇ ಎಷ್ಟೋ ಸರಿ ಅವಳ ಜತೆ ಮಾತನಾಡುತ್ತಲೇ ಇರಬೇಕೆಂದು ಬಯಸಿದ್ದು ಇದೆ. ಕ್ಯಾಂಟೀನ್ ಗೆ  ಹೋದಗಂತೂ ಅವಳ ಮುಂದಿನ ಚೇರ್ ನನಗೆ ಸಿಗಲೇ ಬೇಕು ಎಂಬ ಪ್ರಯತ್ನ ಯಾವತ್ತು ಮಾಡುತಿದ್ದೆ. ಕೇವಲ ದೇಹದ ಸೌಂದರ್ಯ ಅಷ್ಟೇಯಾಗಿದ್ದಾರೆ ನಾನು ಇಷ್ಟೆಲ್ಲಾ ಹೇಳುತ್ತಿರಲಿಲ್ಲವೇನೋ...ಆದರೆ ಅವಳ ಹೆಚ್ಚು-ಕಡಿಮೆ ಅನಿಸದ, ವೇಗ-ನಿರ್ದಿಷ್ಟತೆ ತಪ್ಪದ ಮಾತುಗಳು ಬಹುವಾಗಿ ಆಕರ್ಷಿಸುವಂತೆ ಮಾಡುತಿತ್ತು. ಹೀಗೆ ಅವಳ ಸಾನಿಧ್ಯಕ್ಕೆ ಇಷ್ಟೊಂದು ಪೈಪೋಟಿ ಇರುವಾಗ ನನ್ನಂತವನಿಗೆ ಮುಂದಿಯ ಚೇರ್  ಸಿಗುವುದು ಸುಲಭ ಅಂತು ಆಗಿರಲಿಲ್ಲ. ಆದರೆ, ನಿಜವಾಗಿ ಅದೃಷ್ಟ ಶಾಲಿ ಅಂದರೆ ನಮ್ಮ ಸಂಜಯ. ಇಂಜಿನಿಯರಿಂಗ್ ನ ಎರಡನೇ ವರ್ಷದ, ಎರಡನೇ ತಿಂಗಳ, ಎರಡನೇ ವಾರದ, ಎರಡನೇ ದಿನ propose  ಮಾಡಿದ್ದ. ಅವಳು ಒಪ್ಪಿದ್ದಳು. ಇಬ್ಬರು ಹುಬ್ಬಳ್ಳಿಯ ಅಕ್ಷಯ ಕಾಲೋನಿ ಹಾಗು ನವರಂಗ ಕ್ಕೆ ಸೇರಿದವರು. ಹೇಳಿ-ಕೇಳಿ ಅನುರೂಪವಾಗಿದ್ದ ಅವರ ನಡುವಳಿಕೆ ಹಾಗು ಆಚಾರ-ವಿಚಾರಗಳು ನೋಡಿದ ನಮಗೆ ಸರಿ ಅನಿಸಿತ್ತು.  ನಾವು ಯಾರು ಸೊಪ್ಪು ಹಾಕಿಲ್ಲ.

ಲ್ಯಾಬ್ ನಲ್ಲಿದ್ದ ಸಂಜಯ ಮೊಬೈಲ್ ತೆಗೆಯುವ ಮುನ್ನ ಬೇರೆಯರು ಮೊಬೈಲ್ ನೋಡಿ, ಅವನಿಗೆ ಮೀನಾಕ್ಷಿಯ sms  ಬಗ್ಗೆ ಹೇಳಿದ್ದಾಗ, "ಹಾ..! ಏನಾಯಿತಂತೆ...?" ಎನ್ನುತ ಎದ್ದೆ ಬಿಟ್ಟ. ಕಂಪ್ಯೂಟರ್ ನ mouse , ಪೆನ್ ಹಾಗು notebook ಕೆಳಗೆ ಬಿತ್ತು. ಇಡಿ ಲ್ಯಾಬ್ ಗೊಂದಲಮಯವಾಗಿತ್ತು. ಎಲ್ಲರು O +ve ಗ್ರೂಪ್ ಹುಡುಗ/ಹುಡುಗಿಯರಿಗಾಗಿ  ಹುಡುಕಲು sms -call  ಲ್ಯಾಬ್ ನಲ್ಲೇ ಸುರುಮಾಡಿದರು. ಇದನ್ನೆಲ ನೋಡುತಿದ್ದ , lecturer  ' ಲ್ಯಾಬ್ ನಲ್ಲಿ ಏನು ನಡಿಸಿದ್ದಿರಿ' ಎಂದು ಗದರಿಸಲು ಮುಂದಾಗುತ್ತಿದ್ದಂತೆ, ವಿಷಯವನ್ನು ಸಂಜಯ ನಿವೇದಿಸಿ ಕೊಂಡಾಗ, lecturer   ಲ್ಯಾಬ್ ನ ಟೇಬಲ್ ಮೇಲೆ ಒಮ್ಮೆ ಕೈ ಬಡಿದು:' silent ..! Just  now  I  came  to know through  sanjaya that  meenakshi's  mother  is  admitted . Please, irrespective  caste -creeds of human  being  you  can  donate  the  blood . I  will  continue  lab  afternoon  ...ok ."  ಸುಮಾರು ಹದನೈದು ಜನ ರೆಡಿ..! Lecturer  moral  ಸಪೋರ್ಟ್ ಕೂಡ ಕಾರಣವಾಗಿತ್ತು.

ಅರ್ಧ ತಾಸಿನಲ್ಲೇ ಕಿಮ್ಸ್ ನ  ward  ಗೆ ಬಂದು ಸೇರಿದೆವು. ನಾನಂತು ಇದೆ ಮೊದಲ ಬಾರಿಗೆ ಹತಾಶ ಸ್ಥಿತಿಯಲ್ಲಿದ ಮೀನಾಕ್ಷಿಯನ್ನು ನೋಡಿದೆ. ಯಾವುದೊ ಒಂದು ಆಪರೇಷನ್ ಗೆ ಒಳಗಾಗಿದ್ದ ಮೀನಾಕ್ಷಿಯ ಅಮ್ಮನಿಗೆ ವೈದ್ಯರು ೧೦ bottle  ರಕ್ತ ಬೇಕು ಎಂದು ಹಳಿದ್ದರಂತೆ. ತನ್ನ ಪ್ರೀಯಕರ, ಸಂಜಯ ಸಾಲಿನಲ್ಲಿ ಬಂದವರ ಮುಂಚೂಣಿಯಲ್ಲಿದುದ್ದನ್ನು ಕಂಡು ಖುಷಿಯಾದ ಮೀನಾಕ್ಷಿ ಪ್ರೀತಿಗೆ ಸಾರ್ಥಕ್ಯ ಒದಗಿಸಿದೆಯಲ್ಲೋ ಪುಣ್ಯಾತ್ಮ ಅನ್ನುವಂತೆ ಮೆಲ್ಲನೆ ಅವನಿಗೆ ಮಂದಹಾಸ ನೀಡಿದಳು. ಆದರೆ, ಮೊದಲ ಬಾರಿಗೆ ಭಾವಿ ಅತ್ತೆಯ ಮುಂದೆ ನಿಂತ ಸಂಜಯ ಏನು ಹೇಳಬೇಕು, ಎಷ್ಟು ಹೇಳಬೇಕು, ಹೇಗೆ ಹೇಳಬೇಕು ಅನ್ನುವ  ತ್ರಿಶಂಕು ಸ್ಥಿಯಲ್ಲಿದ್ದ...!; ನಕ್ಕು ಸುಮ್ಮನಾದ. ಗೆಳತಿಯ ಮಂದಹಾಸವೇ ಅವನ ದುಗುಡ ಬಗೆ ಹರಿಸಿತು.
ಮೀನಾಕ್ಷಿಯ ಅಮ್ಮ ಅನಾರೋಗ್ಯದಿಂದಾಗಿ ಸ್ವಲ್ಪ ಬಳಲಿದ್ದಾರೆ ಅನ್ನುದು ಬಿಟ್ಟರೆ ಥೇಟ್  ಮೀನಾಕ್ಷಿಯನ್ನೇ ಹೋಲುತಿದ್ದರು. ನಮ್ಮ ಜೊತೆ ಬಂದಿದ್ದ ವೃಂದಾ ಜೋರಾಗಿಯೇ  " ಹೇಯ್ ಮೀನು..! , ನಿನಂತು ಆಮ್ಮನ xerox  copy  ಯಂತೆ ಇದ್ದೀಯಾ..!?' ಎಂದು ಬಿಟ್ಟಳು. ದುಃಖಿತ ಸನ್ನಿವೇಶದಲ್ಲೂ ಈ ಒಂದು ಮಾತು ಹಲವರನ್ನು ನಿರಾಳವಾಗಿಸಿತ್ತು. ವೃಂದಾಳಿಗೆ ಪ್ರತಿ ಉತ್ತರವಾಗಿ ಮೀನಾಕ್ಷಿಯ ಅಮ್ಮ , " ಹೌದು, ಹಾಗೇ ಕಾಣ್ತಾಳೆ ಆಕೆ, ಓಂದು ಸ್ವಲ್ಪನೂ ಅಪ್ಪನ ರೂಪ ಬಂದಿಲ್ಲ...." ಹೀಗೆ ಅನ್ನುತ್ತಿರುವಾಗಲೇ ಅಮ್ಮ ನ ಮಾತು ಗಡಿ ದಾಟಿ ಹೋಗಿ, ಅಪಹಾಸ್ಯ ಆದೀತು  ಅಂತಲೋ ಏನು-' ಅಮ್ಮ ಸುಮ್ಮನಿರಪ್ಪ , doctor  ಮಾತಾಡಬೇಡ ಅಂತ ಹೇಳಿಲ್ಲೇನು?' ಅಂದಳು. ಕೊನೆಗೆ, ಎಲ್ಲರನ್ನು ಕುರಿತಾಗಿ, 'ಥ್ಯಾಂಕ್ಸ್' ಎಂದು ಹೇಳುತ್ತಾ , 'ಇವರೆನೆಲ್ಲ ಒಂದಿನಾ ನಮೆಗೆ ಕರ್ಕೊಂಡು  ಬಾ' ಎಂದು ಮಗಳಿಗೆ ಹೇಳಿ ತಿರುಗಿ ಮಲಗಿದರು. ಎಲ್ಲರು ಕಾಲೇಜ್ ಗೆ ವಾಪಾಸದೆವು.

ತನ್ನ ಭಾವಿ ಅತ್ತೆಯನ್ನು ನೋಡಿದ ಸಂಜಯ...ದೇವರಿಗೆ ಮೊರೆ ಇಟ್ಟುದ್ದು ಹೀಗೆ : ' ದೇವರೇ, ನನ್ನ ಅತ್ತೆಯ ಅರೋಗ್ಯ ಬೇಗನೆ ಮರಳಲಿ ...ನಿನಗೆ ದೊಡ ನಮಸ್ಕಾರ'. ಕೈಯ ರಕ್ತ ತೆಗೆದ ಜಾಗದಲ್ಲಿ ಒಸರುತಿದ್ದ ರಕ್ತದಿಂದ , 'ಮೀನಾಕ್ಷಿ' ಎಂದು ಬರೆದುದ್ದನ್ನು  ವೃಂದಾ ನೋಡಿ , ' ಹೇಯ್ ಸಂಜು, ಸಾಯ್ಕೋ ಆಗಬೇಡ....ಅವಳು ನಿನಗೆ ಸಿಗ್ತಾಳೆ ಕಣೋ...!" ಅಂದಳು. ಮೀನಾಕ್ಷಿಯ ಕುರಿತಾಗಿ ಸಂಜಯಗಿರುವ ಗೌರವ,ಅಭಿಮಾನ enc  ಡಿಪಾರ್ಟ್ಮೆಂಟ್ ನ ೧೨೦ ವಿದ್ಯಾರ್ಥಿಗಳಿಗೆ ಇಷ್ಟೊತ್ತಿಗೆ ಮನವರಿಕೆ ಯಾಗಿಬಿಟ್ಟಿದೆ . ಕೆಲವರಂತೂ ನಮ್ಮ batch ನ ಮೊದಲ ಮದುವೆ -' ಮೀನಾಕ್ಷಿ ವೆಡ್ಸ್  ಸಂಜಯ' ಎಂದು  ಸಾರಿಯೇ ಬಿಟ್ಟಿದ್ದರು. ಇವತ್ತು ಮೀನಾಕ್ಷಿಯ ಅಮ್ಮ ಅಳಿಯನನ್ನು ಕಣ್ಣಾರೆ ನೋಡಿದ್ದಾರೆ  ಆದರೆ 'ಅಳಿಯತನ' ಗುರಿತಿಸಿದ್ದರೋ-ಇಲ್ಲವೋ ಗೊತ್ತಿಲ್ಲ.
 ಮೀನಾಕ್ಷಿಯ ಅಮ್ಮ ಓಂದು ವಾರದಲ್ಲೇ ಆಸ್ಪತ್ರೆಯಿಂದ ಮನೆಗೆ ನಡೆದರು. ಹದನೈದು ದಿನಗಳಲ್ಲಿ ಸಂಪೂರ್ಣ ಅರೋಗ್ಯ ಹೊಂದಿದರು.ಅ ಬಳಿಕ ಓಂದು ದಿನ ಮಗಳಿಗೆ ರಕ್ತವನ್ನು ಕೊಟ್ಟ ಎಲ್ಲ ಗೆಳೆಯ-ಗೆಳತಿಯರನ್ನು ಕರೆದು ಬರುವಂತೆ ಹೇಳಿದರು. ಮೀನಾಕ್ಷಿಯಷ್ಟೇ ಸಲುಗೆಯಿಂದ ಆಸ್ಪತ್ರೆಯಲ್ಲಿ  ಮಾತನಾಡಿದ ಅವಳ ಅಮ್ಮನ ಮನೆಯ ಕರೆಯನ್ನೇ ನಾವೆಲ್ಲ ಕಾಯುತಿದ್ದೆವು. ಸಂಜಯ ಅಂತೂ ಮಾವನ ಮನೆಯ ಪ್ರವೇಶ ಮಾಡುವ ಕಾಲ ತಾನಾಗಿಯೇ ಬಂದಿದೆ ಅನ್ನುತ  ಕಳೆದ ಹಲವಾರು ದಿನಗಳಿಂದ ಕನಸಿನ ಲೋಕದಲ್ಲಿದ್ದ.  ಮೀನಾಕ್ಷಿಯ ಮನೆಗೆ ಹೋಗುದು ಓಂದು ಸಂಭ್ರಮವಾಗಿ ಉಳಿದಿತ್ತು. ವೃಂದಾ  ಧೈರ್ಯವಾಗಿ ಮುಲಾಜಿಲ್ಲದೆ ಮಾತನಾಡುವುದರಿಂದ, ಮೀನಾಕ್ಷಿ ಮತ್ತು ಸಂಜಯ ಅವಳಿಗೆ, ನಮ್ಮ ಮನೆಗೆ ಬಂದಾಗ  ನಮ್ಮಿಬ್ಬರ ಪ್ರೀತಿಯ ಕುರಿತಾಗಿ ಯಾವುದೇ ಮಾತನಾಡುವುದು, ಜೋಕು ಹೊಡೆಯುವುದು ಬೇಡ ವೆಂದು ಎಚ್ಚರಿಕೆಯನ್ನು ನೀಡಿದರು. ಓಂದು ದಿನ sunday  ೧೫ ಜನ ಸಹಾಪಟಿಗಳೊಂದಿಗೆ, ಸಂಜಯ ತನ್ನ ಹುಡುಗಿಯ ಮನೆಯಲ್ಲಿ ಪಾದವುರಿದ. ಪ್ರವೇಶ ಮಾಡಿದ ತಕ್ಷಣ ಅಲ್ಲೊಂದು ಮೌನ ಆವರಿಸಿತ್ತು....ಸಂಜಯನೇ ಮೊದಲು ಮಾತು ಆರಂಭಿಸಲಿ ಅನ್ನುವುದು ನಮ್ಮೆಲ್ಲರ ಬಯಕೆಯಾಗಿತ್ತು. ಮೀನಾಕ್ಷಿಗೆ ಸಂತೋಷದ ಶಿಖರವನ್ನು ತಲುಪಿದ ಹಂತದಲ್ಲಿದ್ದಳು. ಅವಳಲ್ಲಿ ಸಂಜಯನ ಮೇಲೆ ಕಣ್ಣಿನ ನೋಟ ವಿತ್ತೆ ಹೊರತು ಶಬ್ಧಗಳಿರಲಿಲ್ಲ. ಮನೆಯ ಕೋಣೆಯಿಂದ ಸಾವಕಾಶವಾಗಿ ಹೊರಬಂದ ಮೀನಾಕ್ಷಿಯ ಅಮ್ಮ :" ಬನ್ನಿಯಪ್ಪ, ನೀರು ಬೇಕೆನಪ್ಪ.. ಥ್ಯಾಂಕ್ಸ್ ನಿಮ್ಮಗೆಲ್ಲ...ಜೀವ ಹೋಗುತ್ತೋ ಅನ್ನು ಸ್ಥಿತ್ತಿಯಲ್ಲಿದ್ದೆ...ಅಂತೂ ಆರಂ  ಆಗಿ ಬಂದೆ..." ಎಂದರು. 'ಅಮ್ಮ, ಇವಳು ವೃಂದಾ' ಎನ್ನುತ್ತಾ ವೃಂದಾಳನ್ನು ತೋರಿಸಿದಳು ಮೀನಾಕ್ಷಿ. ನಮ್ಮಗೆ ಗ್ರೂಪ್ ನಲ್ಲಿ ಒಬ್ಬರು ಪರಿಚಯ ಹೇಳಿದ ಕೂಡಲೇ ಉಳಿದವರು ಕುರಿಗಳಂತೆ ಸಹಜವಾಗಿಯೇ ಸುರುವಿಟ್ಟುಕೊಂಡೆವು.

ನನ್ನ ಪರಿಚಯದ ಸಮಯ ಬಂದಾಗ 'ನಾನು ವೆಂಕಟ್, ಅಂಕೋಲಾ' ಎಂದೆ. ಅದಕ್ಕೆ ವೃಂದಾ ,' circuit  ವೆಂಕಟ್'  ಎಂದು ತನ್ನ ಸಹಜ ಚಾಳಿ ಮುಂದುವರಿಸಿದ್ದಳು. ನಕ್ಕಿದ್ದೆ ಬಂತು. ಕೊನೆಯದಾಗಿ ನಮ್ಮ ಹಿರೋ  ಸಂಜಯ. ಏನು ಹೇಳುತ್ತಾನೆ ? ಒಂದುರೀತಿಯ ಗಾಂಭೀರ್ಯ ಅಲ್ಲಿತ್ತು. ' ಇಲ್ಲೇss  ?!...ಅಕ್ಷಯ ಕಾಲೋನಿ ....!' ಎಂದು ತಡವರಿಸುತ್ತಲೇ ಹೇಳಿದ್ದ. ಪರಿಚಯ ಹೇಳುವಲ್ಲಿ ಬಹಳ ಎಡುವಿದವನೆ ಸಂಜಯ. ಎಲ್ಲರು ಚಪ್ಪಾಳೆ ಗಲಾಟೆ ಗಳೊಂದಿಗೆ ಸಂಜಯನ  'ಅಳಿಯತನ' ಶ್ಲಾಘಿಸಲು ಹೊರಟರೆ, ಆಂಟಿಗೆ  ಈತನ ತಡವರಿಸಿದ ಪರಿಚಯದ ಮಾತುಗಳಿಗೆ ಇವರು ಕೂಗುತಿದ್ದಾರೆ ಅಂದು ಕೊಂಡರು. ಪರಿಚಯ ಮುಗಿಯುತ್ತಿದ್ದಂತೆ, ಅಲ್ಲಿಗೆ ಮನೆಯ ಪರಿಚಾರಿಕೆ, ವಿವಿಧ ಬಗೆಯ ಸ್ವೀಟ್ , ಪಾನೀಯಗಳು ಗಳನ್ನು ತಂದಿರಿಸಿದಳು. ವೃಂದಾ ಮತ್ತೆ  'ಸಂಜು  ತಗೋ ಪಾ' ಎಂದು ತಿನುವುದರಲ್ಲೂ ಸಂಜಯನಿಗೆ ಆದ್ಯತೆಯನ್ನು ಪ್ರಕಟಿಸಿದಳು. ಯಾವತ್ತು ಮೌನಿಯಾಗಿ ಅಲ್ಲಿ-ಇಲ್ಲಿ ಒಂದೋ-ಎರಡೋ ಮಾತನಾಡುತಿದ್ದ  ಅಬ್ದುಲ್ : ' ನಮಗ್ ಪಾಸ್ ಮಾಡಬೇ...ಅವ್ ಹೆಂಗೂ ಮುಂದೆ ಕುಡಿಯುವುದೇ ಇದೆಯಲ್ಲ ಈ ಮನೆಯಲ್ಲಿ....!?'  ಎಂದಾಗ  ಮೀನಾಕ್ಷಿ ಒಳಗೆ ನಡೆಳು.....ವೃಂದಾ ತನಗೆ ನೀಡಿದ ಎಚ್ಚರಿಕೆ ನೆನಪಾಗಿ ಒಮ್ಮೆ ಕೈ ಅಲುಗಾಡಿ ಓಂದು ಗ್ಲಾಸು ಕೆಳಗೆ ಬಿತ್ತು. ಅಬ್ದುಲ್ ಹೇಳಿದ ಮಾತಿಗೆ ಉಳಿದವರು ನಗಲು ಪ್ರಾರಂಭಿಸಿದರೆ...ಆಂಟಿ, ಓಂದು glass  ಬಿದ್ದರು ಈ ಹುಡುಗರು ನಗುತ್ತಾರಲ್ಲ ಅಂದು ಕೊಂಡಿರಬೇಕು. ಸಂಜಯನಿಗೆ ಓಂದು ತರಹ ಅಪಮಾನವಾಗಿ, glass  ಬಿದ್ದುದ್ದು ಅಪಶಕುನವೆಂದೆ ಭಾವಿಸಿದ್ದ. 'ಜೋರಾಗಿ, ಸುಮ್ನಿರೋ' ಅಂದ.  ಹೀಗೆ ಜೋಕು ಮುಗಿದ ಮೇಲೆ, ' ಆಂಟಿ, ಅಂಕಲ್ ಎಲ್ಲಿ' ಎಂದು ನಾನು ಕೇಳಿದೆ. ಅದಕ್ಕವರು- " ಅವರು ಬರಲಿಕ್ಕೆ ಲೇಟ  ಆಗ್ತದ...ಅವ್ರು ಗದಗ ದಾಗ್ ರೈಲ್ವೆ ಆಫೀಸ್ ನಾಗ ಕೆಲಸ ಮಾಡ್ತಾರ .' ಅಂದರು. ಉತ್ತರ ಕರ್ನಾಟಕದ ಭಾಷೆ ಅಷ್ಟಾಗಿ ತಿಳಿಯದ ಕರಾವಳಿಯ ಹುಡುಗ ನಾಗಿದ್ದರಿಂದ ಮಾತು ಮುಂದುವರಿಸಲು ನನಗೆ ಸಾಧ್ಯವಗಿಲ್ಲಿಲ್ಲ.ಹೀಗೆ ಹಲವಾರು ಜೋಕು-ಮಾತು-ಗೀತು ಎಲ್ಲ ಮುಗಿಯವ ಹೊತ್ತಿಗೆ ೧ ತಾಸು ಮುಗಿದಿತ್ತು. ತುಂಬಾ active  ಆಗಿ ನಮ್ಮ ಜೊತೆ ಮಾತನಾಡಿದ ಆಂಟಿ ನಮ್ಮ ಗ್ರೂಪ್ ನ ಓಂದು ಸದಸ್ಯೆ ಅನ್ನುವಂತೆ ಭಾಸವಗುತ್ತಿದ್ದರು.
ಮನೆಗೆ ಮರುಳಿದ ಮೇಲೆ, ಲ್ಯಾಬ್ ನ breadboard  ಮೇಲೆ timer  ciruit  ಹಾಕುತಿದ್ದ ನನಗೆ ಕಾಡುವ ಪ್ರಶ್ನೆ circuit  design  ಆಗಿರಲಿಲ್ಲ; ಬದಲಾಗಿ, ಸುಮಾರು ಎರಡು ವರ್ಷದಷ್ಟು ಬೆಳೆದು ನಿಂತಿರುವ ಪ್ರೀತಿಯನ್ನು ಸಂಜಯ-ಮೀನಾಕ್ಷಿ ಯಾಕೆ  ಮನೆಯಲ್ಲಿ ಇದುವರೆಗೆ ಹೇಳಿಕೊಂಡಿಲ್ಲ? ಮೀನಾಕ್ಷಿಯ ಜೊತೆ ಗೆಳತಿಯಂತೆ ವರ್ತಿಸುವ ಅವಳ ಅಮ್ಮ ಕಲಿತ ಹೆಂಗಸು-ಬ್ಯಾಂಕ್ ಉದ್ಯೋಗಿ -ಮಾತ್ರವಲ್ಲ ಸಹಜವಾಗಿಯೇ  ಮೀನಾಕ್ಷಿಯಂತೆ ಎಲ್ಲರೊಂದಿಗೂ ಬೆರೆಯುವ ಸಾಮರ್ಥ್ಯವುಳ್ಳವರು. ಒಬ್ಬಳೇ ಮಗಳಿರುವುದರಿಂದ, ಅದೇ ಅವರ ಸರ್ವಸ್ವ. ಮಗಳು ಏನು ಹೇಳಿದರು 'ನೋ' ಅನ್ನುವರಲ್ಲ. ಹೀಗಿದ್ದರೂ ಮೀನಾಕ್ಷಿ ಈ ವಿಷಯ ಅಡಗಿಸಿ ಇಡಬೇಕೆ? ಇಷ್ಟು ದಿನಗಳೆದರು ಇವಳ್ಯಾಕೆ ಅಮ್ಮನಿಂದ ಅಡಗಿಸಿದ್ದಾಳೆ? ಇಂಥ ಪ್ರಶ್ನೆ ಗಳು ಬಹುವಾಗಿ ಕಾಡ ತೊಡಗಿದ್ದವು. ಪ್ರೀತಿಯ ಬಗ್ಗೆ  ಏನು ತಿಳಿಯದ ನಾನು ಯಾಕೆ ಈ ಜಿಜ್ಞಾಷೆಗೆ ಒಳಗಾಗುವುದು ಎಂದು ನನ್ನನ್ನೇ ಶಪಿಸಿ ಕೊಂಡೆ.

ಸಂಜಯ-ಮೀನಾಕ್ಷಿ ಯವರದು combined  study . ಐದು ಕೋಟಿಯ ಆ C -LITE  ಬಿಲ್ಡಿಂಗ್ ನ ಓಂದು ಟೇಬಲ್ ವಾರದ ೬ ದಿನ ಇವರಿಬ್ಬರಿಗೂ ಮೀಸಲು. ಅಮ್ಮನ ಆದೇಶ ದಂತೆ  ೭ ಗಂಟೆಗೆ ಮನೆ ಸೇರುತ್ತಿದ್ದಳು. ಕೆಲವೊಮ್ಮೆ workshop , seminar  ಗಳಿದ್ದಾಗ ಮಾತ್ರ ಅಮ್ಮನ ವಿಶೇಷ ಪರವಾನಿಗೆಯೇ ಮೇರೆಗೆ campus ನಲ್ಲಿ   ಮೀನಾಕ್ಷಿಗೆ  ಇರಲು ಅವಕಾಶವಿರುತ್ತಿತ್ತು. ಎರಡು ತಾಸು ಹೇಗೂ ಓದಿದ ಬಳಿಕ ಉದಾಸಿನತೆ ತೋರುತಿದ್ದ ಸಂಜಯಗೆ ಬಹಳಷ್ಟು  ಸಾರಿ ಓದಿಸಿದವಳೇ ಅವಳು. ಕೆಲವೊಮ್ಮೆ ಅವನಿಗೆ ಬಯುತ್ತಿದ್ದಳು: ' ಹೇಯ್ ಕೋತಿ , ಯಾಕೆ ನೀನು ಓದಲ್ಲ ....! ನಿನಗೇನು ಬೇಕು...ತಕೋ ಕಂಟ್ರೋಲ್ ಸಿಸ್ಟಮ್ ಮುಗಿಸು ಇವತ್ತು... ಇಲ್ಲಾಂದರೆ ...!'.  ಅದಕ್ಕೆ ಅಷ್ಟೇ ತಿಕ್ಷಣ ವಾಗಿ , ' ಮೀನು, ಸ್ವಲ್ಪ ಸುಮ್ನೆ ಇರ್ರ್ತಿಯಾ...? ನಂಗೆ ಯಾಕೋ   mood  off  ಆಗಿದೆ. ನಿನ್ನೆ  ಕ್ರಿಕೆಟ್ ನಲ್ಲಿ  ಇಂಡಿಯಾ ಬರಿ ಮೂರೂ ರನ್ನ ನಲ್ಲಿ ಆಸ್ಟ್ರೇಲಿಯಾ ಜೊತೆ  ಸೋತು ಹೊಯುತು ಗೊತ್ತ...!?" .
 'ಡುಮ್ಮಾ, ನೋಡು ನಿನ್ನ ತಲೆ ಪೂರ್ತಿ ಕೆಟ್ಟು ಹೋಗಿದೆ. ಈಗ semester  ಮುಗಿಯುವತನಕ  ಕ್ರಿಕೆಟ್ ಗೆ by  ಹೇಳೋ....! ಓದ್ದುದನ್ನೇ ಮರೆತು... ಏನೇನು ಆಲೋಚನೆ  ಮಾಡ್ತಾ ಇರ್ತಿಯಾ...?'  ಪ್ರೀತಿಯಿಂದ ಹೇಳಿದ ಮಾತುಗಳಿಗೆ ಎದುರು ಉತ್ತರ ನೀಡುವುದು ಕಷ್ಟ ಅಂತ ಎಲ್ಲರಿಗು ಗೊತ್ತು. ಸುಮ್ಮನೆ ಪುಸ್ತಕ ತೆರದ. ಹಾಗೆಂದು ಅವನೇನು ದಡ್ಡ ವಿದ್ಯಾರ್ಥಿಯಲ್ಲ. ಆದರೆ, ಎಲ್ಲದಕ್ಕೂ ಮೀನಾಕ್ಷಿಯ ಬಾಯಿಂದ ಪ್ರೀತಿಯ ಅದೆಶವಾಗಿ ಬಂದಾಗಲೇ ಬೆಲೆ..!. ಸೆಮಿನಾರ್ ಗೆ ನೋ ಎನ್ನುತಿದ್ದ  ಸಂಜಯ, ಮೀನಾಕ್ಷಿಯ ಬೇಡಿಕೆಗೆ ಸೆಮಿನಾರ್ ನೀಡಿದ್ದ. ಅಚ್ಚುಕಟ್ಟಿನ ಸಿಪಾಯಿಯಂತಿದ್ದ ಅವಳು, ಇವನ ಲ್ಯಾಬ್ ನ ಜರ್ನಲ್ ಎಷ್ಟೋ ಸಾರಿ ತಿದ್ದಿದ್ದಾಳೆ;ಚಿತ್ರ ಗಳನ್ನೂ ಮರು ಬಿಡಿಸುವಂತೆ ಆದೇಶಿಸಿದ್ದಾಳೆ. ಸಂಜಯ ಮೊದಲ ದಿನಗಳ ವ್ಯವಹಾರ ನೋಡಿದ್ದರೆ, ಮೀನಾಕ್ಷಿಯ ಪ್ರೀತಿಯ ಲೋಕದಲ್ಲಿ  ಸಂಪೂರ್ಣವಾಗಿ ಬದಲಾಗಿದ್ದಾನೆ. ಜೀವನದಲ್ಲಿ ಆಕಾಂಕ್ಷೆ, ಗಾಂಭೀರ್ಯ, ಉತ್ಸಾಹ, technical  growth  ಬಗ್ಗೆ ಬಹಳ ಗಮನ ಕೊಟ್ಟಿದ್ದಾನೆ. ಓಂದು ಹಂತದಲ್ಲಿ ಪರಿಪೂರ್ಣ ವಿದ್ಯಾರ್ಥಿಯಾಗಿ, ಪರಿಪೂರ್ಣ ಪ್ರೇಮಿಯಾಗಿ ಕಾಣಿಸಿಕೊಳ್ಳುತ್ತಿದ್ದಾನೆ.

ಯಾವಾಗ ಆಸ್ಪತ್ರೆ ರಕ್ತ ದಾನ  ನಡಿಯಿತೋ, ಅಲ್ಲಿಯಿಂದ ಮೀನಾಕ್ಷಿ ಯ ಅಮ್ಮ ಸಿನೆಮಾ ನೋಡುವ  ಮೀನಾಕ್ಷಿಯ ಗೆಳೆಯ-ಗೆಳತಿಯರ  ಗ್ರೂಪ್ ನ ಪರ್ಮನೆಂಟ್ ಸದಸ್ಯೆ. ಎಷ್ಟೋ  ಬಾರಿ ಈ ಹುಡುಗರು- ಹುಡುಗಿಯರು ಸಿನೆಮಾ ನೋಡಲು ಹೋಗಿದ್ದಾರೆ ನನಗೆ ಗೊತ್ತಿಲ್ಲ. ಯಾಕಂದರೆ, ಸಿನೆಮಾ ನೋಡುವ ವಿಷಯದಲ್ಲಿ ನಾನೊಬ್ಬ ಅತಿಥಿ ಕಲಾವಿದರ ಹಾಗೆ ಆಗೊಮ್ಮೆ-ಈಗೊಮ್ಮೆ ಕಾಣಿಸಿಕೊಳ್ಳುತ್ತಿದ್ದೆ. ನಾನು ಸಿನೆಮಾ ಕ್ಕೆ ಹೋಗಲು ಕಾರಣ ಎರಡೇ ಇರುತಿದ್ದವು-ಓಂದು ಗ್ರೂಪ್ ನ ಜೊತೆ ಒಂದಿಷ್ಟು ಮೋಜು-ಮಸ್ತಿ, ಎರಡನೇ ದಾಗಿ ಎಲ್ಲೊಂದಿಷ್ಟು ತಿನ್ನಲು ಸೀಗುವ ಪಾನೀಯಗಳು, junk  foodಗಾಗಿ.  ಒಂದು ಕಾಲದಲ್ಲಿ ಹಿಂದಿ ನನಗೆ ಸ್ವಲ್ಪವೂ ಅರ್ಥವಾಗುತಿರಲಿಲ್ಲ, ಹೀಗುರುವಾಗ bluff  master  ಹಿಂದಿ ಫಿಲಂ ನೋಡಲು ಹೋಗಿದ್ದೆ.  ಈ ಕಡೆ ಅರ್ಥವಾಗದ ಸಿನೆಮಾ-ಇನ್ನೊಂದೆಡೆ ಅಭಿಷೇಕ್ ಬಚ್ಚನನ್ನು ಗುರುತಿಸಲಾಗದ ನನ್ನ ಅಜ್ಞಾನ ನನಗೆ ಯಾಕಪ್ಪ ಈ ಫಿಲಂ ಎಂದು ಇಂಟರ್ವಲ್ ಟೈಮ್ ನಲ್ಲಿ ಹೊರಬಂದವನು ಸಿನೆಮಾಕ್ಕೆ ಗುಡ್ ಬೈ ಹೇಳಿ ಮನೆ ಸೇರಿದ್ದೆ. ಆದರೆ, ೨೦೦೭, ಇಂಜಿನಿಯರಿಂಗ್ ನ 'ಕೊನೆ'ಯ ವರ್ಷ, ಗೆಳೆಯರ ಜೊತೆ ನೋಡಲಿರುವ 'ಕೊನೆ'ಯ ಸಿನೆಮಾ, ಹುಬ್ಬಳಿಯಲ್ಲಿ ನೋಡಲಿರುವ 'ಕೊನೆ'ಯ ಸಿನೆಮಾ ಎನ್ನುವಂತ ಭಾವದಿಂದಾಗಿ ಮೀನಾಕ್ಷಿ ಮತ್ತು ಅವಳ  ಗ್ರೂಪ್ ಫಿಲಂ ಬಗ್ಗೆ ತಿಳಿಸಿದಾಗ, 'ನಾನು ಬರ್ತೇನೆ' ಅಂದೆ. ಆದರೆ ನನಗೆ ಸಿನೆಮಾ ಎಲ್ಲಿ, ಯಾವುದು ಏನು ಗೊತ್ತಿರಲಿಲ್ಲ. ಕೇವಲ 'ಕೊನೆಯದು' ಅನ್ನುವ ಭಾವವೇ ನನ್ನನು ಇಷ್ಟವಿಲ್ಲದ ಜಾಗದಲ್ಲಿ ೩ ತಾಸು, ಫಿಲಂ ಎಂಬ ನೆಪದಲ್ಲಿ  ಕಳೆಯುವಂತೆ ಮಾಡುವಂತಿತ್ತು ಆ ಸನ್ನಿವೇಶ. ಆದರೆ, "ಕನ್ನಡ ಸಿನೆಮಾ, ತುಂಬಾನೇ ಚಲೋ ಅಂತ .... ಕಾಮಿಡಿ ಟೈಮ್ ಗಣೇಶ್ ದಂತೆ....ಮುಂಗಾರು ಮಳೆ .... ಸುಜಾತ takis  ದಾಗ್ ಅದ " ಎಂದು ಹೇಳುತಿದ್ದ ವೃಂದಾಳ ಮಾತು ಕೇಳಿದಾಗ, ಕನ್ನಡ ಫಿಲಂ ಅನ್ನುವುದಕ್ಕೆ ಸ್ವಲ್ಪ ಸಂತೋಷವಾಗಿತ್ತು.

ಅಂತು ಮಧ್ಯಾಹ್ನ ಮೂರು ಗಂಟೆಗೆ ವಿದ್ಯಾ ನಗರದಿಂದ ಬೇಂದ್ರೆಬಸ್ಸಿನಲ್ಲಿ ಸುಜಾತ theatre  ಹತ್ತಿರ ಇಳಿದು ಕೊಂಡೆವು.ಸಿನೇಮಾ ನೋಡಲು ಬಹಳ ಜನ ಹೊರಗೆ ಕಾಯುತ್ತಿದ್ದರು. ಟಿಕೆಟ್ ಸಿಗುತ್ತೋ-ಇಲ್ಲವೋ ಎನ್ನುವ ಅಂತಕ ನಮ್ಮ ವರಿಗೆಲ್ಲರಿಗೂ ಇತ್ತು . ಆದರೆ ಅಂತು-ಇಂತೂ ಸಂಜಯ ಪ್ರಯತ್ನ ಮಾಡಿ ಟಿಕೆಟ್ ತಂದಿದ್ದ. ಟಿಕೆಟ್ ತರುವುದು  ಅವನಿಗೆ ಕೇವಲ ಟಿಕೆಟ್ ಪ್ರಶ್ನೆ ಯಾಗಿರಲಿಲ್ಲ, ಜೊತೆಗೆ ತನ್ನ ಅತ್ತೆ, ತನ್ನ ಹುಡುಗಿಯ ಸಿನೆಮಾದ ಆಸೆಯನ್ನು ಈಡೇರಿಸಬೇಕಾಗಿತ್ತು. ತಿಯೇಟರ್ ಪ್ರವೇಶಿಸುವವರ ಗಲಾಟೆ ಜೋರಾಗಿಯೇ ಇತ್ತು.ಕೆಲವರು director  ಯೋಗರಾಜ ಭಟ್ ಒಳ್ಳೆ ಫಿಲಂ ಕೊಟ್ಟಿದ್ದಾನೆ ಅಂದರೆ, ಇನ್ನೂ ಕೆಲವರು ಜೋಗ ಸೀನ್  ಚೆನ್ನಾಗಿದೆ ಅಂತೆ ಅಂದರೆ, ಪೂಜಾ ಗಾಂಧಿ ಅಷ್ಟು ಚೆನ್ನಾಗಿಲ್ಲ ಆದರೆ ಸಕತ್ ಆಗಿ act ಮಾಡಿದ್ದಾಳೆ ಅಂತೆ ಮಗ.... ಎನ್ನುವ review  ಕೇಳಿ ಸಿನೆಮಾದ ಬಗ್ಗೆ ಸಾಕಷ್ಟು ಮಾಹತಿ ಕಲೆಹಾಕಿದ್ದೆ. ಅದೇ ದಿನ ಏನಾದರು ಸಿನೇಮಾದ ಬಗ್ಗೆ quize  compitition  ಇದ್ದರೆ ನಾನೇ ಗೆಲ್ಲುತ್ತಿದೇನೋ ಏನೋ ...!?  ಸುಮಾರು ಒಂದು ತಾಸು ಹೊರಗಡೆ ಕಾದು ನಿಂತ ಬಳಿಕ, ಒಳಗೆ ಶೋ ನೋಡಿದವರೆಲ್ಲ ಹೊರ ಬರಲಾರಂಭಿಸಿದರು. ಜನ ಫುಲ್ ಸೈಲೆಂಟ್...! ಚೆನ್ನಾಗಿರುವ ಹುಡುಗಿಯ ಮುಖ ನೋಡೋಣ ಅಂದರೆ ಅವರ ಮುಖಕ್ಕೆ ಕರ್ಚಿಫ್  ಹಿಡಿದ್ದಿದ್ದಾರೆ.  ನಾಲ್ಕು ವರ್ಷಗಳಲ್ಲಿ ಅಪರೂಪಕ್ಕೆಂದು ನಾನು Theatre  ಗಳಿಗೆ ಹೋಗಿದ್ದರು, ಈ ರೀತಿ ಗಲಾಟೆ ಇಲ್ಲದೆ ಜನ ಹೊರ ಬರುತ್ತಿರುವುದನ್ನು ಮೊದಲ ಬಾರಿಗೆ ನಾನು ನೋಡುತ್ತಾ ಇದ್ದೆ. ನಿರವ ಮೌನ ಕಂಡು, ನಾನು ಹುಬ್ಬಲ್ಲಿಯಲ್ಲೇ ಇದ್ದೇನೆ ತಾನೆ ಎಂದು ಪ್ರಶ್ನಿಸಿ ಕೊಂಡೆ.

ಒಳಗೆ ಪ್ರವೇಶ  ಮಾಡಿದೆವು. ಮುಂಗಾರು ಮಳೆ ಸಿನೇಮಾ ಪ್ರಾರಂಭವಾಯಿತು. ಒಂದು ಮಗುವಿನಂತೆ ಫಿಲಂ ನೋಡಿದೆ. ಕತ್ತಲೆಯ ಕೋಣೆಯಲ್ಲಿ ಕುಳಿತಿದ್ದರಿಂದ ಯಾರು-ಏನು ಮಾಡುತ್ತಿದ್ದಾರೆ ನನಗೆ ಗೊತ್ತಿರಲಿಲ್ಲ. ಆದರೆ ಸಿನೇಮಾ ಮುಗಿದು, ಸ್ಕ್ರೀನ್ ಮೇಲೆ  ' ಪ್ರೀತಿ ಮಧುರ...ತ್ಯಾಗ ಅಮರ...!' ಕೊನೆಯ ವಾಕ್ಯ ಓದಿದ ಮೇಲೆ ಎಲ್ಲರು ಹೊರ ನಡೆದರು. ಸಂಜಯ ಒಂದು ರೀತಿಯ ಆತಂಕದಲ್ಲಿದ್ದ; ಮೀನಾಕ್ಷಿಯ ಕಣ್ಣುಗಳು Theatre  ಒಳಗಡೆ ಅತ್ತಿದ್ದಾಳೆ ಅನ್ನುದನ್ನು ಸಾಬಿತು ಮಾಡುತಿದ್ದವು. ಆದರೆ ಮೀನಾಕ್ಷಿಯ ಅಮ್ಮ ಮಾತ್ರ ಒತ್ತರಿಸಿ ಬರುವ ಕಣ್ಣಿರಿಗೆ ತಮ್ಮ ಕರ್ಚಿಫ್ ಒತ್ತಿ ಹಿಡಿದ್ದಿದ್ದರು. "ಅಮ್ಮ, ಅದು ಸಿನೇಮಾ ..!" ಎಂದು ಮೀನಾಕ್ಷಿ ಸಮಾಧಾನ ಪಡಿಸಲು ಮುಂದಾದರೆ, 'ಹೌದು,ಸಿನೇಮಾ ಸ್ವಲ್ಪ ಭಾವನಾತ್ಮಕವಾಗಿ ಶಾಕ್ ಕೊಡುವಂತಿದೆ... ಸವಕಾಶ್ ಅವರನ್ನು ಕೆಳಗೆ ಕರ್ಕೊಂಡು ಬಾ'  ಎಂದು ನಾನು ಅವಳಿಗೆ ಹೇಳಿದೆ. ನಾವೆಲ್ಲರು ಅವರು ಕೆಳಗೆ ಬರುವ ತನಕ ಅಲ್ಲೇ ನಿಂತೇ ಸಿನೆಮಾದ review - pros -cons  ಬಗ್ಗೆ ತಿಳಿಯಲು ಆರಂಭಿಸಿದ್ದೆವು. ಅಲ್ಲಿಗೆ ಬಂದ ಮೀನಾಕ್ಷಿ ಅಮ್ಮ ಮೊದಲಿಗಿಂತ ಸ್ವಲ್ಪ ಸಮಾಧಾನವಾಗಿದ್ದಂತೆ  ಕಾಣುತಿದ್ದರು. ಆದರೆ ಅವರು ಸಿನೇಮಾದ ಕುರಿತಾಗಿ ಭಾವುಕರಾಗಿಯೇ ಇದ್ದರು. " ಗಣೇಶ್ ಗೆ  ಹಾಗೆ ಆಗ ಬಾರದಿತ್ತು....ಪ್ರೀತಿಸಿದ ಹುಡುಗಿ ಅವನಿಗೆ ಸಿಕ್ಕಿದ್ದರೇನೆ ಖುಷಿಯಾಗ್ತಿತು...ಪಾಪ..". ಎಂದು ಎಲ್ಲರನ್ನು ಉದ್ದರಿಸಿ ತಮ್ಮ review  ಪಾಯಿಂಟ್ ಹೇಳಿದ್ದರು. ಪ್ರೀತಿಯ ಪರೀಕ್ಷೆಯ ದಿನಗಳಲ್ಲಿದ್ದ ಸಂಜಯನಿಗೆ , ಮೀನಾಕ್ಷಿಯ ಅಮ್ಮನ ಈ review  ಪಾಯಿಂಟ್ ನೂರಕ್ಕೆ ೯೦%  ಅಂಕ ತಂದು ಕೊಟ್ಟಂತೆ ಭಾಸವಾಗಿತ್ತು. ಸಂತೋಷದ ನಗೆ ಬಿರಿದ್ದ. ವೃಂದಾ ತನ್ನ ಬಾಯಿಂದ ಹೊರಬರಲಿದ್ದ ಅದ್ಭುತ-ಭಯಾನಕ ವಾಕ್ಯವನ್ನು ತಡೆ ಹಿಡಿದ್ದುದ್ದು ಅವತ್ತಿನ ಅವಳ ಅದ್ಭುತ ಸಾಧನೆಯೇ ಆಗಿತ್ತು.
                                                                                           ----ಮುಂದುವರಿಯುವುದು 

(ಮುಂದಿನ ಭಾಗದಲ್ಲಿ ನಿರಕ್ಷಿಸಿ:ಮೀನಾಕ್ಷಿ ಮತ್ತು ಸಂಜಯ ಮದುವೆಯಾದರೆ ? ಮುಂದಿನ ಅವರ ಸಾಧನೆ ಏನು ? ಪ್ರೀತಿ ಇಲ್ಲದೇನೆ  ಬದುಕ ಬಹುದೇ ? )

No comments:

Post a Comment