Tuesday, November 6, 2012

ಊಟದ ಮೇಜಿನ ಮೇಲೆ ನಡೆಯುವ ಮದುವೆಗಳು

ಊಟಕ್ಕೆ ಕುಳಿತಾಗ ಬರಿ ಊಟ ಮಾಡುವ ಮಂದಿ ಸಿಗುವುದು ಬಹಳ ಕಷ್ಟ. ಒಂದೊಮ್ಮೆ ಯಾವುದೇ ವಿಷಯದ ಕುರಿತಾಗಿ, ಧನಾತ್ಮಕವಾಗಿ ಮಾತನಾಡಲು ಸಾಧ್ಯವಾಗಿರದಿದ್ದರು, ಊಟದ ರುಚಿಯ ಕುರಿತಾಗಿ ತೆಗಳಿಕೆಯ ಮಾತೊಂದಾದರು ಇರುತ್ತದೆ ಅನ್ನುವುದು ಬಹುಷ್ಯ ಓಂದು ಸತ್ಯ. ನಾನಂತು ಊಟಕ್ಕೆ ಅನ್ನ-ಸಾಂಬಾರುಗಳಿಗಿಂತ ಮುಖ್ಯವಾಗಿ ಮಾತು ಇಷ್ಟ ಪಡುತ್ತೇನೆ. ಏಕಾಂಗಿಯಾಗಿ ಮನೆಯಿಂದ ಆಫೀಸ್ ಸೇರಿದ ಮೇಲೆ, ಆಫೀಸ್ ನ ಕೆಲಸ ಮುಗಿಸಿ ನಗುತ್ತ, ಬೇಡವಾದ, ಆಸಕ್ತಿಯ, ಕುಹಕ, ಅಣಕಿಸುವ, ವಿರೋಧಾಭಾಸದ , ಭವಿಷ್ಯದ ಕುರಿತಾದ ಮಾತುಗಳು ಆಡಲು ಅವಕಾಶ ಸಿಗುವುದು ಆಫೀಸ್ ನ ಮಧ್ಯಾನ ಊಟದ  ಮೇಜು ಮಾತ್ರ. ಎಷ್ಟೋ ಪ್ರಯತ್ನ ಪಟ್ಟು ಓಂದು ಪಾರ್ಟಿ, ಅಥವಾ ಗೆಳೆಯರ ಬಳಗದ ಸೇರ್ಪಡೆ ಅಂದರು ಯಾರದರೊಬ್ಬರು ಕೈ ಕೊಡುವುದು ಅಥವಾ ಊಟದ ಕುರಿತಾಗಿ ಆರ್ಡರ್ ಮಾಡುವುದರಲ್ಲೇ ಸಮಯ ಕಳೆದು ಹೋಗುವುದರಿಂದ  ಆಫೀಸ್ ನ ಮಧ್ಯಾನ ಊಟದ ಟೇಬಲ್ ಓಂದು ರೀತಿಯಲ್ಲಿ ಬಹಳ ಮುಖ್ಯ ಅವಕಾಶವೇ.

ನಾವು ಏನೆಲ್ಲಾ ಮಾತಾಡುತ್ತೇವೆ ? ಅನ್ನುವ ವಿಷಯ ನನಗೆ ಇಚೆಗೆ ನಡೆದ ಕ್ವಿಜ್ ಕಾರ್ಯ ಕ್ರಮದ ನಂತರ ಗಮನಿಸಲು ಪ್ರಾರಂಭ ಮಾಡಿದ್ದೆ. ನಾನು ಕ್ವಿಜ್ ನಲ್ಲಿ ಭಾಗವಹಿಸಲು ನಮ್ಮ ಊಟದ ಟೇಬಲ್ ನ ಚರ್ಚೆಗಳೇ ಆಸಕ್ತಿಯನ್ನು ತಂದು ಕೊಟ್ಟಿತ್ತು ಅಂದರೆ ತಪ್ಪಾಗಲಾರದು. ನಾವು ಅಮೆರಿಕನ್ ಚುನಾವಣೆ, ಭಾರತದ G -ಹಗರಣಗಳು(CWG , 3G , Coal  G ....), IAC (India  Against  Corruption ), IFC (India  For  Corruption ನಾವು ಹಗರಣದಲ್ಲಿ ಬಳಲುತ್ತಿರುವವರಿಗೆ ಕೊಟ್ಟಿರುವ ಹೆಸರುಗಳು ), ಐಫೋನ್, ವಿಂಡೋಸ್- ಲಿನಕ್ಸ್, ಇತ್ತೆಚಿಗೆ ಬಂದ-ತಂದ ಮೊಬೈಲ್, ನಿನ್ನೆಯ ಕ್ರಿಕೆಟ್, ರಿಲೀಸ್ ಅದ ಹೊಸ ಸಿನೆಮಾ. ಕ್ರಿಕೆಟ್ ವಿಷಯ ಬಂದಾಗ ಮಾತ್ರ ನಾನು ಫುಲ್ ಸೈಲೆಂಟ್.!( ಮೂರೂ ಕೋಲು ಓಂದು ಬಾಲು ಎಂತ ದರಿದ್ರ ಆಟ ಅಂತ ಎಷ್ಟೋ ಸರಿ ನೋವು ನುಂಗಿ ಸುಮ್ಮನೆ ಕುಳಿತ್ತಿದ್ದೆ).  ಇವುಗಳ ಜೊತೆಗೆ, ಇತ್ತೇಚೆಗೆ ಬಂದ ಹುಡುಗಿ-ಅವಳ ನಡೆ-ನುಡಿ ಗಳ ಕುರಿತಾಗಿ ಒಂದಿಷ್ಟು ಜೋಕು...! ಲವ್ ವಿಷಯದಿಂದ ಪ್ರಾರಂಭವಾಗಿ ಜಾತಿ ಮತಗಳ ಮೇಲೆ ಹರಿಹಾಯ್ದು  ಮದುವೆ ಎಂಬಲ್ಲಿಗೆ ವಿಷಯ ನಿಲ್ಲಿಸಿ ಸುತ್ತಲು ಕಣ್ಣು ಹರಳಿಸಿ,ಬದಲಾಗದ ಸಾಮಾಜಿಕ ನಿಯಮಗಳಿಗೆ ಒಂದಿಷ್ಟು ಛಿ ಥೂ ಅಂದು ಕೊಂಡು ನಿರ್ಗಮಿಸಿದ ದಿನಗಳು ಎಷ್ಟೋ ಇದ್ದಾವೆ.

 ನಮ್ಮ ಸಮಾಜದ  ಕೆಲವು ನಿಯಮಗಳು ಉತ್ತರವಿಲ್ಲದವುಗಳು. ಶಾಲೆಗಳಲ್ಲಿ ಉಚ್ಚ ಆದರ್ಶಗಳ ಬೋಧನೆ; ನೈಜ ಸಮಾಜದಲ್ಲಿ ನೀಚ ಬಾಳು. ಇದು ಯಾರೋ ನಮ್ಮ ಮೇಲೆ ಹೇರಿದ್ದರೋ ಅಥವಾ ನಾವೇ ಮಾಡಿಕೊಂಡ  ದಾರಿಯೋ ತಿಳಿಯದು. ನಾನು (ನೀವು ಕೂಡ ಇರಬಹುದು) ಹಾಯ್ ಸ್ಕೂಲ್ ಸೇರಿದಾಗ ಎಂಥೆಂತ ನಿಬಂಧಗಳನ್ನು(essay) ಬರೆದಿದ್ದೆ..! 'ಜಾತ್ಯತೀತತೆ ' ಬರೆಯುವಾಗ  ನಾನು ಜಾತಿಯ ವಿರುದ್ಧ ವಾಗಿ ಬರೆದಿದ್ದೆ; ' ವರದಕ್ಷಿಣೆ' ಬರೆಯುವಾಗ  ಅದೊಂದು ಮಹಾ ಪಾಪ.... ವರದಕ್ಷಿಣೆ ಕೇಳುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಅಂತಲೂ ಬರೆದಿದ್ದೆ. ಇನ್ನು ಸರ್ವಜ್ಞ , ಪುರಂದರ ದಾಸ, ಕನದಾಸರ ಕುರಿತಾಗಿ ಬರೆಯುವಂತ 10 ಮಾರ್ಕ್ ನ ಪ್ರಶ್ನೆಗಳಿಗೂ ನಾನು ಯಾವತ್ತು ತಪ್ಪು ಉತ್ತರ ಬರೆದಿರಲಿಲ್ಲ. ಕುವೆಂಪು 'ವಿಶ್ವಮಾನವ ಸಂದೇಶ' ವಾರೆ ವ್ಹಾ...!  ಹೇಳುವುದೇನು?
ಇವತ್ತು ಅಂತ ಅದ್ಭುತ ಕ್ಲಾಸ್ ಗಳಲ್ಲಿ  ಉಚ್ಚ ಅಂಕಗಳು ಪಡೆದು, ಜಾತಿ-ಕನ್ನಡ  ಅಂತ  ಕೃಪಾಂಕದಿಂದ ಇಂಜಿನಿಯರಿಂಗ್ ಪಡೆದು , ವಿಶ್ವೆಶ್ವರರಂತೆ ಸಾಧನೆಯ  ದಾರಿ ತುಳಿಯುವುದಾಗಿ  ಊರು -ಮನೆಗಳಲ್ಲಿ ಅಂತಹ ನಂಬಿಕೆ ಹುಟ್ಟಿಸಿ, 5 ಅಂಕಿಗಳ  ಪಗಾರ ಪಡೆದು ಊಟದ  ಟೇಬಲ್ ಮೇಲೆ ನಾವು ಮಾತನಾಡುವ  ಜಾತ್ಯತೀತತೆ  ಎಂಥಹದು  ಗೊತ್ತೇ?
ಊಟದ ಟೇಬಲ್ ನ ಕೆಲವು ಚರ್ಚೆಗಳು ಹೀಗಿವೆ : ಒಬ್ಬನ ಮಾತು -" ನಾನು  ಅವಳನ್ನು ಇಷ್ಟ ಪಡುತ್ತೇನೆ, ಆದರೆ ಅವಳು ನಮ್ಮ ಜಾತಿಯವಳು ಅಲ್ಲ. ನಮ್ಮ ಮನೆಯಲ್ಲಿ ಒಪ್ಪಲು ಸಾಧ್ಯವೇ ಇಲ್ಲ ...!...ಮನೆಯಲ್ಲಿ ಓದದಿದ್ದರೂ ಪರವಾಗಿಲ್ಲ ...ಜಾತಕ ಸರಿಯಿಲ್ಲದಿದ್ದರೂ ಪರವಾಗಿಲ್ಲ  ಕಾಸ್ಟ ಇಸ್ ಮಸ್ಟ್..!".
ಇನ್ನೊಬ್ಬನ ಮಾತು: ' ನಮ್ಮ ಮನೆಯಲ್ಲಿ ಜಾತಿಯ ಬಗ್ಗೆ ಅಂತ ಸಮಸ್ಯೆ ಇಲ್ಲ . ಆದರೆ ಹುಡುಗಿ ಮಾತ್ರ ನಮ್ಮ ಜಾತಿಗಿಂತ ಮೇಲು ಜಾತಿಯವಳಾಗಿರಬೇಕು. ಇಲ್ಲಾಂದರೆ ಒಪ್ಪುವುದಿಲ್ಲ.."
ಮತ್ತೊಬ್ಬನ ಮಾತು :' ಆದರೆ, ನನಗಂತೂ ಇಂತ ಮದುವೆಯಲ್ಲಿ ಇಷ್ಟನೇ ಇಲ್ಲ .... ನಾವೇನಾದರೂ ಲವ್  ಮದುವೆ  ಆದರೆ ಅದು ನಷ್ಟವೇ...! ಯಾಕಂದರೆ, ನೋಡು....ನನ್ನ ತಂಗಿ ಮದುವೆಗೆ ನಮ್ಮ ಮನೆಯಲ್ಲಿ ಬರೋಬರಿ 10 ಲಕ್ಷ ವರದಕ್ಷಿಣೆ ಕೊಟ್ಟಿದ್ದೇವೆ.ಈಗ  ನನ್ನ ಮದುವೆಯಲ್ಲಿ ಅದನ್ನು ರಿಟರ್ನ್ ತರಬೇಕು. ಸಮಾಜದಲ್ಲಿ ಇದು ಒಂತರ ಕೊಡುವ-ತೆಗೆದು ಕೊಳ್ಳುವ  ವಿಚಾರ..ಅದಕ್ಕೆಲ್ಲ್ ತಲೆ ಯಾಕೆ ಕೊಡಬೇಕು....ಮಾವ ಹೇಗೋ ಕಾರ್  ಕೊಡ್ತಾನೆ...!"

 ಹಾಗೆಂದು ಎಲ್ಲರೂ ಇಂಥ ಮಾತುಗಳನ್ನು ಹೇಳುತ್ತಾರೆ ಅಂತಲ್ಲ. "ಜಾತಿ ಮತಗಳಿಗಿಂತಲು ಸುಶಿಕ್ಷಿತ ಸಂಗಾತಿ, ಅರ್ಥ ಮಾಡಿಕೊಳ್ಳುವ ಸಂಗಾತಿ, ಸಮಾನ ಆಸಕ್ತಿ ಹಾಗು ಬದುಕಿನ ಕುರಿತಾಗಿ ಸಮಾನ ವಿಚಾರ ಧಾರೆ ಹೊಂದಿರುವ ಸಂಗಾತಿ ಇದ್ದಾರೆ ಎಷ್ಟು ಒಳ್ಳೇದು..! ದೂರದ ಉರಿನಲ್ಲಿ ಬದುಕುವ ನಮಗೆ ಸ್ವಂತ ಊರಿನ ಸಂಪ್ರದಾಯ ಗಳಿಗಿಂತಲೂ ಆಯಾ ಪ್ರದೇಶದಲ್ಲಿ ಹೊಂದಿಕೊಂಡು ಬದುಕುವುದೇ ಅವಶ್ಯಕವಾಗುತ್ತದೆ. ಜಾತಿಯೇ ಮುಖ್ಯವೆಂದು, ನಮ್ಮ ಪರಿಸರದ ಅರ್ಥವೇ ಆಗದ ಯಾರೊಬ್ಬರನ್ನು ಕಟ್ಟಿಕೊಳ್ಳುವುದು  ಸುಲಭವೇ ? ಇದೆಲ್ಲ ಹೇಗೆ ತಿಳಿಸುವುದು? ಮದುವೆ  ಬಗ್ಗೆ ಮಾತನಾಡಿದರೆ ತಪ್ಪಾಗಿ ಅರ್ಥೈಸುವ ಸಮಾಜ ನಮ್ಮದು. ಜಾತಿ-ಮತ ಕಟ್ಟಳೇ  ಮೀರಿದರೆ ಬುದ್ಧಿಹೀನರಂತೆ ನಮ್ಮನ್ನು ನೋಡಿಕೊಲ್ಲಗುತ್ತಾದೆ.  ಅದಕ್ಕಾಗಿ ಹಣೆಬರಹ ನಂಬಿಕೆಯೇ  ಬಹಳ ಮುಖ್ಯ " ಎಂತೆಲ್ಲ ತೋಡಿ ಕೊಂಡವರು  ಇದ್ದಾರೆ. ಇನ್ನೂ  ಮರ್ಡರ್ ನಂತಹ ಮಹಾನ್ ಕಾಮುಕ ಚಿತ್ರವನ್ನು ಕಣ್ಣು ಮಿಟಿಕಿಸದೇ  ಥೀಯೇಟರ್  ನಲ್ಲಿ ನೋಡಿ, ಮದುವೆ  ಬಗ್ಗೆ ಮಾತನಾಡುವಾಗ ಊಟದ ಟೇಬಲ್ ನಲ್ಲಿ ಸಮಾಜವೇ ಕೆಟ್ಟು ಹೋಗಿದೆ...ಧರ್ಮ ಹಾಳಾಗಿದೆ...ಇವರೆಲ್ಲ ಸಂಸ್ಕೃತಿ ಇಲ್ಲದವರು ಅಂತ ಹೇಳಿ ಹೋದವರು ಇದ್ದಾರೆ.

ನಾನು ನಂಬಿದ ಸಾಹಿತ್ಯ ಸತ್ಯವೇ ? ನಂಬಿದ ವ್ಯಕ್ತಿಗಳು ಸತ್ಯವೇ ? ಸರ್ವಜ್ನ ನಿಂದ  ಹಿಡಿದು ಎಲ್ಲ ಧರ್ಮ ಸುಧಾರಕರು, ಕವಿಗಳು ಜಾತ್ಯತೀತ  ನಿಲುವು ಪ್ರಕಟಿಸಿದ್ದಾರೆ. ' ಜ್ಯೋತಿ ತಾ ಹಿನವೇ ? , ' ಕುಲ ಕುಲ ವೆಂದು....', ಎಂತ ವಾಕ್ಯಗಳ ರಚನೆ ಕೇವಲ ಸಂಗಿತಕ್ಕಾಗಿಯೇ ?  ಹೋಗಲಿ  ಬಿಡಿ - ಹೊಸಕಾಲದ- ಅಧುನಿಕ ಕಾಲದ ವ್ಯಕ್ತಿ  ಮಾನ್ಯ ಸಚಿವ  ನಂದನ ನಿಲಕೆಣಿ  ತಮ್ಮ 'ಇಮ್ಯಾಜಿನ್  ಇಂಡಿಯ ' ಪುಸ್ತಕದಲ್ಲಿ ಕೂಡ ಜಾತಿಯೇ  ನಮ್ಮ ಭಾರತಿಯ ಭವಿಷ್ಯಕ್ಕೆ  ದುರಂತ ಅನ್ನುವಂತೆ ವರ್ಣಿಸಿದ್ದಾರೆ. ಇವರೆಲ್ಲ ಸುಮ್ಮನೆ ಬರಿತಾರೆಯೇ ...!  ಉಡುಪಿಯ ಮಠದಲ್ಲಿ ನಡೆದ  ಹಲವಾರು ಕಾರ್ಯಕ್ರಮಗಳನ್ನು ನೋಡಿದ್ದೇನೆ. ಅಲ್ಲಿ 'ಸರ್ವೇಜನ ಸುಖಿನೋ ಭವಂತು ...! ವಸುದೇವ ಕುಟುಂಬ' ಅಂತೆಲ್ಲ ವರ್ಣಿಸುವ ವಾಕ್ಯ ಗಳು ಕೇವಲ ಕೇಳುಗರ  ಮನವೋಲಿಸುವ ಮೋಹಕ ಮಾತುಗಳೇ? ಇಲ್ಲದೇ ಹೋದರೆ ವೇದಗಳಲಿಲ್ಲದ, ಧರ್ಮಗೃಂಥ ಗಳಿಲ್ಲದ, ಬುದ್ಧಿಜೀವಿಗಳೆಲ್ಲ ಒಪ್ಪದ  ಜಾತಿಯನ್ನು ಸಮ್ಮತಿಸಿ  ಅಂತರ್ಜಾತೀಯ ವಿವಾಹಗಳು ನಿಶಿದ್ಧವೆಂದು ಪಂಡಿತರಾದ ವಿಶ್ವತೀರ್ಥರಂತವರು ಹೇಳಬಹುದೇ?
Oh ...Sorry  education  destroyed  me ...!!!!!!!!!!!! :)

No comments:

Post a Comment