Saturday, November 24, 2012

ಪ್ರೇಮಗೀತೆಗೊಂದು ಷರಾ ಬರೆದ ಕೂಲಿ

ನಾನು ಒಮ್ಮೆ ಸ್ವರ್ಣ ನದಿಯ ತೀರದಲ್ಲಿ  ಹೋದಾಗ ಪ್ರೇಮ ವಂಚಿತ ಮಣಿಪಾಲದ ವಿದ್ಯಾರ್ಥಿ ಭೇಟಿಯಾಗಿದ್ದ. ಶಾಂತ ನದಿಯ ತೀರದಲ್ಲಿ ನನ್ನ ಭಾವಚಿತ್ರ ತೆಗೆಯಲು ಅವನಲ್ಲಿ ಸಹಾಯ ಕೇಳಿದಾಗ ಅವನು ನನ್ನ ಜೊತೆ ಮಾತು-ಕತೆ ನಡೆಸಿ ತನ್ನ ಬದುಕು ವಿವರಿಸಿದ.  ಆ ಕತೆಯನ್ನು ಆಧಾರಿಸಿ ಒಂದು ಲಹರಿಯಲ್ಲಿ ಮುಳುಗಿ ಈ  ಕತೆ ನಿರೂಪಕ ಬರೆದೆ.
ಈ ಕವನದಲ್ಲಿ ಪ್ರೇಮಿಯು  ಗೆಳತಿಯಿಂದ  ದೂರವಾಗಿ ಏಕಾಂಗಿಯಾಗಿ ಹೋಗುತಿರಲು ಒಬ್ಬ ಕೂಲಿಯ  ಹತ್ತಿರ ಕುಡಿಯಲು ನೀರು  ಕೇಳುತ್ತಾನೆ. ದಿಗ್ಭ್ರಾಂತ ಪ್ರೇಮಿಗೆ ಅವನು ಜೀವನದ ಸಲಹೆ ಕೊಟ್ಟು ವಿದ್ಯಾರ್ಥಿಯನ್ನು ಉದ್ಧರಿಸುತ್ತಾನೆ.

ನೋಡಿ ತರುಣಿಯ ಮೊಗವ
ಮೋಡ ಕವಿದಂತಾಗಿ ಮನಕೆ
ಮೂಢ ಭಾವವು ಜನಿಸಿರೆ...
ಎಡ ಬಲದಲಿ ಕಂಡನು ವಿನಾಶವ....||1||

ಅರಿಯದಾಯಿತು ಹಣೆಬರಹವ
ಹರ -ಹರಿ -ಗುರುಗಳ ನೆನೆದು
ತಿರುವಂತಾಯಿತು ಜಗದಗಲ
ಬರಿದಾಯಿತು ಬದುಕೆನ್ನುತ .....||2||

ಅಲ್ಲಿ ಸಿಕ್ಕನು ಶಾಂತ ಸ್ವರೂಪ
ಜಲ್ಲಿ-ಕಲ್ಲುಗಳ ಯಂತ್ರ ನಿರೂಪಕ
ಬಲ್ಲಿದವಗೆ ಏನು ಗೊಳ್ ? ಎಂದು ಪ್ರಶ್ನಿಸಿ
ಚೆಲ್ಲಿದನು ತನ್ನ ಸಹಾಯ ಹಸ್ತವ....|| 3||

ಏನು ಹೇಳಲಿ ಬಂಧುವೇ ?
ಬಾನಿಗೆ ಏಣಿ ಕಟ್ಟಲು ಹಾತೊರೆದು
ಮಾನ ಕೆಳೆದು ಹೋಯಿತಲ್ಲೋ
ಘನ ಬದುಕಿ ಬರಿದಾಯಿತಲ್ಲೋ ..||4||

ಮೌನ ಯಾನವು ಲೇಸೆಂದು
ನಾನಿತ್ತ ಪೋಪಿರೆ ನಿನ್ನ ಕಂಡೆ
ಪಾನಿಯಗಳನಿತ್ತು ಸಲಹಿರೆ
ಜನಾರ್ಧನನು ಕರುಣಿಪ ನೆಂದ ..||5|

ಕೂಲಿಯು ನೀರನ್ನು ಕೊಟ್ಟು
ತಲೆಯಲ್ಲ ಕೆದಕುತ್ತ ಭಾವುಕನಾಗಿ
ಲಲನೆಯ ಒಲವಿಗೆ  ಬರಿದಾದ
ಸೋಲ್ಲಂಗಳ ಕೇಳುತ ನಿಂತ ....||6||


ಮೂರು ವರ್ಷಗಳ ಹಿಂದೆ
ಯಾರು ಎಂದೇ ತಿಳಿಯದೇ
ವರ ಕನ್ಯೆ ಎಂದು ಭಾವಿಸಿ
ಜಾರಿ ಹೋದೇನು ಅವಳತ್ತ ...||7||

ಪ್ರೀತಿಯೇ ಕುರುಡು ಅಂತರಲ್ಲವೇ
ಕೀರ್ತಿ-ಬದುಕೇ ಮರೆತು
ಸ್ವಾರ್ಥ ಭಾವವೂ ಮರೆತು
ಶ್ವೇತ ಹೃದಯವು ಅವಳಿಗೆ ತೆರೆದಿಟ್ಟೆ ..||8||

ಬಂದು ಕುಣಿದಳು ಹಗಲು-ಇರುಳು
ಮಂದ ಬುದ್ದಿಗೆ ತಿಳಿಯದಾಯಿತು
ಸೌಂದರ್ಯದ ಸೆಳೆತಗಳ ಭಾವ
ಅಂದೇ ಬದುಕು ತಿರಿಹೋಗಿದೆ .....||9||

ಮಲ್ಪೆಯ ಮರಳಲ್ಲಿ  ಉರುಳಾಡಿ
ಕಲ್ಪೆನೆಯಲ್ಲೇ ಭವಿಷ್ಯ ಕಂಡು
ಸ್ವಲ್ಪವೂ ಯೋಚಿಸದೆ  ಹೋದೆನಲ್ಲ ಇವಳ ವಿ-
ಕಲ್ಪ ಬುದ್ದಿಯ ಬಗೆಯನ್ನು....||10||

ಅಪ್ಪ ಕೊಟ್ಟ ಹಣವನ್ನೆಲ್ಲ ಸುರಿಸಿ
ಲ್ಯಾಪ್ಟಾಪ್ ಅನ್ನು  ಕೊಡಿಸಿಬಿಟ್ಟೆ
ತಪ್ಪು ಅನಿಸಲಿಲ್ಲ ಅಂದು ಆ  ವರ್ತನೆ
ಒಪ್ಪಿ ಕೊಂಡ  ಪ್ರೀತಿ ಯಲ್ಲವೆ...?!..||11||

ಹಂಗೊಯೋ ದಲ್ಲಿ ಊಟ ಮಾಡಿ
ಮಂಗಳೂರಿನಲ್ಲಿ ಸಿನೆಮ ನೋಡಿ
ಇಂಗು ತಿಂದ ಮಂಗ ನಾದೆಲ್ಲೋ
ಹಂಗಿನ ಪ್ರೀತಿ  ನನ್ನ ದಾಯ್ತಲ್ಲೋ...||12||

ಬ್ಯೂಟಿ ಪಾರ್ಲೋರ್   ಕರ್ದೊಯ್ದೆ
ಕ್ಯಾಟ್ ವಾಕ್ ಡ್ರೆಸ್ಸು ನೂ  ತಂದುಕೊಟ್ಟೆ
ನೀಟಾಗಿ  ಬಾಳುವಳು  ಎಂಬ  ಭ್ರಮೆಯಲಿ 
ಸುಟ್ಟು  ಕೊಂಡೆನಲ್ಲೋ  ಹೃದಯ ಮಂದಿರವ  ...||13||

ನೊಂದ ಹೃದಯದ  ಯುವಕನು
ಬೆಂದ ಬಗೆಯನು ತೆರೆದಿಡಲು
ಸಂದ  ಕಾಲವನ್ನು ಮರೆತು
ಗೊಂದಲಗಳ ಅರಿತು ಬದುಕೆಂದ... ||14||

ಕಲಿತವರ ಬವಣೆಯು  ಇಷ್ಟೆಯೋ ..!
ಒಲಿದ ಹೆಣ್ಣು ಮಣ್ಣು ಗುಡಿಸಿದಲೇ   ಬಾಳ
ಲಲನೆಯರ ಸಂಗ  ಯಾತಕ್ಕೆ  ವಿದ್ಯಾರ್ಥಿಗೆ
ಬಲ್ಲವನಲ್ಲ  ಕಲಿಕೆಯ ಒಳಗುಟ್ಟು;ಚಿಂತಿಸುತಲಿ ||15||

ಎನಗಿಲ್ಲ ಅಕ್ಷರ ಲೋಕದ ಜ್ಞಾನ
ಕನಕಾಂಗಿಯಾರನಂತು ನಾ  ಬಯಸಿಲ್ಲ
ಮನದಲಿ ಸೋತಿಹೆನು  ಅರಿಯಲು
ನಿನ್ನ ದುಗುಡ ದುಮ್ಮಾನಂಗಳೆಂದ ...||16||

ಮನದಲ್ಲಿ ನೊಂದು ಬಗೆಯಲ್ಲಿ ಬೆಂದು
ಮೌನದಲ್ಲಿ ಈ  ಪರಿಯಲಿ ಕೊರಗುತಿರೆ
ಅನುಮಾನವೂ ಎನಗೆ ನಿನ್ನ  ಭಾವದಲ್ಲಿ
ತನುವು  ನೀ  ಉಳಿಸಿಕೊಂಬೆ ಎಂಬುದರಲಿ ...||17||

ಬದುಕೆಂಬದು  ದೇವರಾಟವು
ಸದುಪಯೋಗದಲಿ ಕಳೆ  ಕಾಲವ
ಓದುತ ಬರೆಯುತ ಸಾಗುತಿರೆ
ವಿದುರತ್ವವು  ಮರೆಯುವುದೆನ್ನುತ   ||18||

ಬುದ್ದಿವಂತರು ಇವರು ವಿಜ್ಞಾನಿಗಳು
ಸದ್ದು ಮಾಡುವರು ಮಾತುಗಳಲಿ
ಬದುಕಿನ ಅರ್ಥವೇ ತಿಳಿಯದ
ಹದ್ದಿನ ಬಾಳು ಇವರದೇ? ಹರ..ಹರಾ..! ||19||


ಬಡವನಿಗೆ ಹೊಟ್ಟೆಯ ಚಿಂತೆ
ಕೆಡುವವಗೆ  ಒಲವಿನ ಚಿಂತೆ
ಬುಡವೇ  ಇಲ್ಲ ಇವರ  ಬದುಕಿಗೆ
ಒಡನೆ  ಪ್ರೀತಿ ಪ್ರೇಮಕ್ಕೆ ಬಲಿಗಳು...||20 ||

ಅಕ್ಷರ  ಬದುಕಿಗೆ ಆಧಾರ
ಶಿಕ್ಷಣ ಜೀವನಕ್ಕೆ ಸ್ವರ್ಗ
ಲಕ್ಷಣಯುತ ಬದುಕು ಪ್ರಿಯವು
ಚಕ್ಷುಗಲಿರೆ  ತಿಳಿಯಲು ಸತ್ಯವನ್ನು  || 21||
 
ಕಾರ್ಮಿಕನ ಮಾತುಗಳ ತಿಕ್ಷಣ
ಮರ್ಮವನರಿತ  ಭಗ್ನ ಪ್ರೇಮಿಯು
ಕರ್ಮ ಲೋಕದ  ಪರಿಯನ್ನು ಚಿಂತಿಸುತ
ನಿರ್ಮಲ ಬದುಕಿಗೆ  ಆಣೆಯನಿತ್ತ ....|| 22||

ತನ್ನ  ಒಳಗಿನ  ಭಾವ ಶಕ್ತಿಗಳ
ಕನ್ನ  ಹೊಡೆದ ಯುವತಿಗೆ
ಅನ್ನದ  ಋಣ ವಿಲ್ಲ ವೆಂದೆನುತ
ಮನ್ನಿಸುವುದೇ ಲೇಸು - ಲೇಸೆಂದ         || 23||

ಮನೆಯನ್ನು ಸೇರಿದ ತವಕದಲಿ
ಅನುಮಾನಿಸದೆ  ಹೊತ್ತಿಗೆಗಳನ್ನು ತೆರೆದು
ಮನಸ್ಸನ್ನು  ಓದಿನಲ್ಲಿ ಸೇರಿಸಲು
ಜನ-ಮನವ  ಗೆದ್ದು ಬಂದ...||24||

ಪ್ರೀತಿ ಪ್ರೆಮಗಳೇ  ಸುಳ್ಳು
ಕೀರ್ತಿ- ಬದುಕುಗಳು  ಸತ್ಯ
ನರ್ತಿಸುವೆ  ಇಂದು  ನೆನೆದು
ತರ್ಕಿಸಿ ಹಿಂದಿನ ನೋವುಕತೆಗಳನು || 25||

ಗೆಳೆಯರೇ ಕೇಳಿ  ಎನ್ನೆಯ
ಏಳಿಗೆಯ  ಮಾತುಗಳನು
ಬಳಿಕ  ನೀವೇ ಯೋಚಿಸಿ
ಸುಳ್ಳೆಂದು ಅನುಮಾನಿಸಿರೆ   ||26||

ಬೇಡ ಬೇಡ ಲಲನೆಯರ  ಸಂಗ
ಹಾಡಿ  ನಲಿಯೋಣ  ಸುಮ್ಮನೆ
ಜೋಡಿಯಾಗಲು  ಕ್ಷಣಗಳು  ಸಾಕು
ಬೇಡಿಕೊಂಡರು ಸಿಗದೆಂದು ಸ್ವಂತಿಕೆ  ..|| 27||

ಪ್ರೇಮ  ಕಲ್ಪನೆ  ಮಾತ್ರ-ಇದು ಸತ್ಯ
ಕ್ರಮೇಣ  ಸವೆಸುವುದು  ನಿಮ್ಮ ಹೃದಯ
ಪ್ರೇಮ ರೋಗವು ಬಲು ಜಾಡ್ಯ
ಚರ್ಮ ರೋಗದನತಲ್ಲ  ನಿನರಿಯೇ ||28 ||

ಕವಿತೆ ರೂಪದೊಳು  ನಿಮ್ಮ ಹೃದಯ
ಸವಿಯಲು ಕಲ್ಪಿಸಿರೆ ಎನಗೊಂದು
ಅವಕಾಶ ಜೀವನದೊಳು  ತಮಗೆ
ದೇವರು ಕರುಣಿಸಲೆಂದು ಬೇಡಿಕೊಂಬೇನು  || 29||

ಮಂಗಳಂ  ಪಾಡುವೇನು  ಮೊದಲ  ಬರಹಕ್ಕೆ
ಅಂಗಳದೊಳು ಕುಣಿದು  ನಲಿಯುವೇನು
ತಿಂಗಳ ರಾತ್ರಿಯ  ಚಂದದ  ಬೆಳಕಿನಲಿ
ಮಂಗಳವಾಗಲಿ ತಮಗೂ ತಮ್ಮವರಿಗೂ  || 30||

No comments:

Post a Comment