Thursday, August 23, 2012

ತೆರೆದ ಹೃದಯದಿಂದ !

ನಾನು ಹಿಂದೂ ಧರ್ಮದ ಸಂಸ್ಕೃತಿಗೆ ಬೆಲೆ ಕೊಡುತ್ತೇನೆ...ವಿವೇಕಾನಂದರ ವಿಚಾರಧಾರೆ ನನಗೆ ಇಷ್ಟವೇ. ನಾನು ಬೌದ್ಧಿಕವಾಗಿ ಜನ ಸಾಮಾನ್ಯ...ಯಾವತ್ತು ಬುದ್ದಿ ಜೀವಿ ಅಲ್ಲ. ನನಗೆ ಸರಿಯನಿಸಿದ್ದನ್ನು ಮತ್ತೊಬ್ಬರ ಸ್ವಾತಂತ್ರ್ಯಕ್ಕೆ ಧಕ್ಕೆ ಬರದ ಹಾಗೆ ಬರೆಯುದು ನನ್ನ ಹಕ್ಕು ಅನ್ನುವುದಕ್ಕಿಂತಲೂ ಕರ್ತವ್ಯ ವೆಂದು ಭಾವಿಸುತ್ತೇನೆ.

ನಾನು ಕೆಲವೊಮ್ಮೆ ವೈಜ್ಞಾನಿಕ ವಿಷಯಗಳಿಂದ ದೂರವಾಗುವಂತ ಶನ್ನಿವೆಷಗಳು ಬಂದಾಗ ಸಾಹಿತ್ಯದ ಕಡೆಗೆ ಓಡಿಹೋಗುತ್ತೇನೆ. ಅದರಲ್ಲೂ ಹುಟ್ಟುತ್ತಲೇ ಯಕ್ಷಗಾನದಂತಹ ಕಲೆಯನ್ನು ರೂಢಿಸಿಕೊಂಡು ಬಂದಿರುವುದು ಕಾರಣವಾಗಿರಬಹುದು. ಇನ್ನುವೊಂದು ವಿಶೇಷ ಅಂದರೆ, ಇತ್ತೀಚಿಗೆ ಜಾತಕ ನೋಡಿದ ಒಬ್ಬರು, ನೀವು ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದ್ದಿರಿ ಹೀಗಾಗಿ ನಿಮಗೆ ಕಲೆಯಲ್ಲಿ ಆಸಕ್ತಿ ಉಂಟಾಲ್ಲವೇ? ಎಂದು ಹೇಳಿದಾಗ ಮೀಸೆ ಬೊಳಿಸಿದ್ದರು, ಒಮ್ಮೆ ಗಲ್ಲದ ಮೇಲೆ ಕೈ ಆಡಿಸಿ , ಅದಕ್ಕೆ ಅಲ್ಲವೇ ಉಡುಪಿಯಲ್ಲಿ ನಿಮಗೆ ಭೇಟಿಯಾಗಿರುವುದು ಅಂದೇ...!  ಹೀಗಾಗಿ ಜಾತಕ ಕೂಡ ನಾನು ಕಲಾಭಿಮಾನಿ ಅಂತ ಹೇಳಿತಲ್ಲ ಅನ್ನೋದಕ್ಕೆ ನಾನು ಜಾತಕ್ಕೆ ಬಹಳ ಗೌರವದಿಂದ ಕಾಣುತಿದ್ದೇನೆ.

ಇಂತ ಎಲ್ಲ ವಿಷಯಗಳ್ಳನ್ನು ಯಾರು ತಾನೇ ಬರೀತಾರೆ? ಜಾತಕ-ಮದುವೆ ಇವೆಲ್ಲ ತಂದೆ-ತಾಯಿ ಅಥವಾ ನಮ್ಮ ಮನೆಯ ಹಿರಿಯರಿಗೆ ಬಿಟ್ಟ ವಿಚಾರ ಗಳಲ್ಲವೇ? ಒಂದು ತರ ನಾಚಿಕೆ ಅಂತನೂ ಮಾತಾಡುವ  ಮಂದಿ ಇದ್ದಾರೆ... ಇರಲಿ ಅಷ್ಟಕ್ಕೂ ನಾನೇನು ಪ್ರತಿನಿತ್ಯ - ತ್ರಿ-ಕಾಲ ಸಂಧ್ಯಾವಂದನೆ ಮಾಡಿ ಬೆಳೆದ ಹುಡುಗನು ಅಲ್ಲ. ಹೀಗಾಗಿ ನಾಲ್ಕು ಜನರಿಗೆ, ನನ್ನ ಸಮಾಧಾನಕ್ಕೆ, ಆಸಕ್ತಿಗಾಗಿ ನಡೆದು ಹೋದ ಕೆಲವು ವಿಚಾರಗಳನ್ನು "ಸಚ್  ಕಾ ಸಮ್ನಾ" ಎನ್ನುವಂತೆ ಬರಿಯ ಬೇಕು ಅಂದು ಕೊಂಡಿದ್ದೇನೆ.ಯಾರಿಗೆ ಇಷ್ಟವೋ ಅವರು ಓದಬಹುದು.

"ನಾನು" ಅಂದರೆ ಕೇವಲ ನಾನಾಗಿ ಸಮಾಜದಲ್ಲಿ ಉಳಿಯಲು ಸಾಧ್ಯವೇ ಇಲ್ಲ. ಈ ನಾನು ಯಾವಾಗಲೂ ತಂದೆ-ತಾಯಿ, ಅಕ್ಕ-ತಂಗಿ,ಅಣ್ಣ-ತಮ್ಮ, ಆಜು-ಬಾಜು ಮನೆಯವರು, ನಮ್ಮ ಗೆಳೆಯರು, ನನ್ನ ಸಹೋದ್ಯೋಗಿಗಳು ಹೀಗೆಲ್ಲ ಸುತ್ತಿಕೊಂಡಿರುತ್ತದೆ. ಕೆಲೋವೊಮ್ಮೆ ಹೊಗಳುವಂತ -ಕೆಲೋವೊಮ್ಮೆ ತೆಗಳುವಂತ ವಿಷಯಗಳಿಗೆ ಈ ನಾನು ಸುತ್ತಿ ಕೊಂಡರೆ, ಅದರಲ್ಲಿ ನನ್ನನು ಹೊರತು ಪಡಿಸಿ ಬೇರೆಯರು ಸುತ್ತಿಕೊಂಡರೆ ಅವರ ಹೆಸರು ಅಥವಾ ಅಂಥವರ ವ್ಯಕ್ತಿತ್ವ ಸಾದರ ಪಡಿಸುವುದು ತಪ್ಪಾಗುತ್ತದೆ. ಹೀಗಾಗಿ ಕೆಲವು ವಿಷಯಗಳು ಸಿನಿಮಾದಂತೆ ಹೊಸ ಪಾತ್ರಗಳನ್ನು ಸೃಷ್ಟಿ ಮಾಡಿ -ಕೆಲವೊಂದನ್ನು ಕೊಲೆ ಮಾಡಿಸಿ ನನ್ನ ಬರಹ ಮುಂದುವರಿಸಬೇಕಾಗುತ್ತದೆ. ಅಂದಹಾಗೆ ಸಾಹಿತ್ಯ-ಬರಹ ಒಂದು ಸಂತೋಷಕ್ಕೆ ಹೊರತು ಯಾರದೋ ವ್ಯಕ್ತಿತ್ವವನ್ನು ಸಾಯಿಸುವುದಕ್ಕಲ್ಲ.

ಇಷ್ಟೊಂದು ಪಿಟಿಕೆ ಯೊಂದಿಗೆ, ತಮ್ಮೆಲ್ಲರ ಮುಂದೆ ಕಿರು ಬರಹಗಳೊಂದಿಗೆ ಬರುತ್ತಿದೇನೆ. (ಅಕ್ಷರ ತಪ್ಪುಗಳಿಗೆ ಕ್ಷಮೆಯಿರಲಿ...!)

No comments:

Post a Comment