Friday, August 31, 2012

ಉಡುಪಿ ಯಾಕಪ್ಪ?

ಉಡುಪಿ ಅಂದಾಗ ಕಣ್ಣ ಮುಂದೆ ಬರುವುದೇನು?
ಹಾ, ನಾನು ೭ ನೇ ತರಗತಿಯಲ್ಲಿಂದಲೇ ಉಡುಪಿ ಬಗೆ ಕೇಳುತ್ತ ಬಂದಿದ್ದೇನೆ. ಮುಲ್ಕಿ ಪರಿಕ್ಷೆಯಲ್ಲಾಗಲಿ, ಎಸ್ ಎಸ್ ಎಲ್ ಸಿ ಪರಿಕ್ಷೆಯಲ್ಲಾಗಲಿ ಅಥವಾ  ಹನ್ನರೆಡ್ನೆತಿ ಪರಿಕ್ಷೆಯಲ್ಲಾಗಲಿ ಯಾರು ಫಸ್ಟ್ ಅಂದರೆ ಉಡುಪಿ ಎಂಬ ಉತ್ತರ ಸಿದ್ದವಾಗಿರುತಿತ್ತು. ಉಡುಪಿಯ ಮಕ್ಕಳು ಯಾವ ಗೈಡು  ತಗೊತ್ತಾರೆ ಅನ್ನು ಪರ್ಶ್ನೆ ೮ ತರಗತಿಯಲ್ಲಿ ಬಹಳ ತಲೆ ಕೆಡಿಸಿತ್ತು. ಕೆಲೋವೊಮ್ಮೆ, ನಮ್ಮ ಮನೆಯಲ್ಲಿ ಅಥವಾ ಊರಲ್ಲಿ ದೂರದ ಟ್ರಿಪ್ ಅಂದರೆ ಧರ್ಮಸ್ಥಳವಾಗಿರುತಿತ್ತು.ಹೀಗಾಗಿ ಮಣಿಪಾಲ ದಲ್ಲಿ ಹಾದುಹೋಗುವಾಗ, ಎತ್ತರದ ಆಸ್ಪತ್ರೆಯನ್ನು ನೋಡಲು ಕೆಂಪು ಬಸ್ಸಿನ ಕಿಡಕಿಯಿಂದ ಹೊರ ನೋಡಲು ನಮ್ಮ ಜೊತೆಯಾಗಿದ್ದ ಮಕ್ಕಳೆಲ್ಲರು ಕಿದಕಿಗೆ ಬಂದು ನಿಲ್ಲುತ್ತಿದ್ದೆವು. ಇನ್ನೊಂದು ವಿಶೇಷವೆಂದರೆ, ವರ್ಷದಲ್ಲಿ ಒಂದು ಸರಿಯಾದರೂ ಭೇಟಿ ನೀಡುವ ಯಕ್ಷಗಾನ ಮೇಳಗಳು -ಸಾಲಿಗ್ರಾಮ ಮೇಳ ಹಾಗು ಪೆರ್ಡೂರು ಮೇಳ. ಈ ಮೇಳಗಳ ಕೊನೆಯ ಪರಿಚಯವಿರುವುದು ಉಡುಪಿ ತಾಲ್ಲೂಕು(ಈಗ ಜಿಲ್ಲೆ)ಅನ್ನುವುದು. ರೇಡಿಯೋ ವಾರ್ತೆಯಲ್ಲೂ ಉಡುಪಿ ಅವಾಗವಾಗ ಶುದ್ಧಿಗೆ ಬಂದಿರುತ್ತಿತು- ಓಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ(ಬಹುಶ ಉಡುಪಿ ಇತಿಹಾಸದಲ್ಲಿ ಬಂದ್ ಪದವೇ ಇಲ್ಲವೇನೋ ಅನ್ನುವ ಹಾಗೆ) . ಹವಾಮಾನ ವರದಿಯಲ್ಲಾದರೂ ಉಡುಪಿ ಸಮೀಪದ ಆಗುಂಬೆಯಲ್ಲಿ ಭಾರಿ ಮಳೆ ಎಂದು ಓದಲಾಗುತ್ತಿತು.

ಹುಬ್ಬಳ್ಳಿಯಲ್ಲಿ ನಾಲ್ಕು ವರ್ಷ ಕಳೆದ ನನಗೆ , ಉಡುಪಿಗೆ ಬಂದಾಗ  ಸದಾ ಹಸಿರಿನ, ಚಿಕ್ಕ ಚೊಕ್ಕ ಊರು  ನೋಡಿ ಖುಷಿಯೇ ಖುಷಿ. ಒಂದು ಕಡೆ ಕೂಲ್ ಕನ್ನಡ (" ಎಂತಾ !")  ಇನ್ನೊಂದು ಕಡೆ ಇಲ್ಲಿಯ ಸಾಂಸ್ಕೃತಿಕ ವೈಭವ! ನಾನು ನನ್ನ ಉತ್ತರ ಕನ್ನಡದ ತವರು ಮನೆಯನ್ನೇ ಮರೆತು ಬಿಟ್ಟೆ.

 ಉಡುಪಿಗೆ ಬಂದ ಮೇಲೆ ನನಗೆ ಇಲ್ಲಿಯ ಸಂಸ್ಕೃತಿ ಮತ್ತೆ ನನ್ನನ್ನು ಯಕ್ಷಗಾನದಂತ ಸಾಂಸ್ಕೃತಿಕ ಪರಂಪರೆಗೆ ಕರೆದೊಯಿತು. ಉಡುಪಿ ಶ್ರೀ ಕೃಷ್ಣನ ರಾಜಾಂಗಣ, ಕೊಡವೂರಿನ ಶಂಕರನಾರಾಯಣ, ಅಂಬಲಾಪದಿಯದ ಶ್ರೀದೇವಿ, ಕಡೆಯಾಳಿಯ ಶ್ರೀ ದೇವಿ ಮಹಿಷ ಮರ್ದಿನೀ ದೇವಾಲಯಗಳಲ್ಲಿ ನಡೆಯುವ ಯಕ್ಷಗಾನ ಹಾಗೂ ಇತರ ಕಾರ್ಯಕ್ರಮಗಳಿಗೆ ಭೇಟಿನಿದುತ್ತಿದೆ. ಆ ಸಾಂಸ್ಕೃತಿಕ ಕಾರ್ಯಕ್ರಮಗಳಿಂದಾಗಿ ನನ್ನ ಹೃದಯ ಸೂರೆ ಗೋಳ್ಳುತಿತ್ತು.

ರಾಜಾಂಗಣ ವಂತೂ ಒಂದು ವಿಶೇಷವಾದ ಪ್ರದೇಶ. ಇದರ ಕುರಿತು ಬರೆದರೆ ತುಂಬಾ ಬರೆಯ ಬೇಕು.ರಾಜಾಂಗಣದಲ್ಲಿ ಕುಳಿತ ಪ್ರೇಕ್ಷಕರು ಖಂಡಿತವಾಗಿಯೂ ರಾಜರೇ ವಾಗುತ್ತಾರೆ. ಬೇಕಾದಷ್ಟು ಆಸನಗಳು,ಎತ್ತರದಲ್ಲಿರುವ ಸಭಾಂಗಣ, ಸಮಯ ನಿರ್ಧಾರಿತ ಕಾರ್ಯಕ್ರಮಗಳು ಹಾಗೂ ಶಾಂತ ಮತ್ತು ಆಸಕ್ತ ಪ್ರೇಕ್ಷಕ ವರ್ಗ. ಇಲ್ಲಿ ನಡೆಯುವ ಕಾರ್ಯಕ್ರಮಗಳು ವಿಶಿಷ್ಟ ವಾಗಿರುತ್ತವೆ. ಭಗವದ್ಗೀತೆ ಪಠಣ, ಯಕ್ಷಗಾನ, ನೃತ್ಯ, ಭಕ್ತಿ ಸಂಗೀತ, ಕೊಳಲು ವಾದನ, ವಿಚಾರ ಗೋಷ್ಠಿ, ಬಾಲ ಕಿಶೋರ ಕಾರ್ಯಕ್ರಮಗಳು.... ಹೀಗೆ ಹಲವಾರು ಚಟುವಟಿಕೆಗಳು ಸದಾ ಜರುಗುತ್ತಲೇ ಇರುತ್ತವೆ. ಯಕ್ಷಗಾನ ಟ್ರಸ್ಟ್ ನಿಂದ ನಡೆಸಲ್ಪಟ್ಟ ಕಿಶೋರ ಯಕ್ಷಗಾನ ಗಳಂತೂ ಒಂದು ವಿಶಿಷ್ಟವಾದ ಸಾಧನೆ. ಒಮ್ಮೆ ರಾಜಾಂಗಣ ಪ್ರವೇಶ ಮಾಡಿದರೆ ಉಡುಪಿ ಸಾಂಸ್ಕೃತಿಕ ಪರಂಪರೆ ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ.

I love Udupi..!


1 comment: