Thursday, November 8, 2012

ಮಕ್ಕಳ ದಿನಾಚಾರಣೆ : ಭಾಗ -1

ನಾನು ಚಿಕ್ಕವನಿದ್ದೆ. ನಾನು ಶಾಲೆಯ ಮೆಟ್ಟಿಲು ತುಳಿದುದ್ದು  ನನ್ನ 8 ನೆ ವಯಸ್ಸಿನಲ್ಲಿ. ಹೀಗಿರುವಾಗ  ನನ್ನ ಎಂಟು ವರ್ಷಗಳು-ನಾನು ಅಮ್ಮನ ಮಡಿಲಿನಿಂದ ಜಾರಿ ಕೊಂಡು ತೋಟ-ಗದ್ದೆ ಇತ್ಯಾದಿಗಳನ್ನು ಸುತ್ತುತ್ತ ಇದ್ದೆ. ಆ  ಬದುಕು ಎಷ್ಟೊಂದು ಸ್ವಾತಂತ್ರ್ಯ!.  ಓದು ಎಂದು ಯಾವತ್ತು ನನ್ನ ಅಪ್ಪ-ಅಮ್ಮ ಗದರಿಸಿದ್ದೆ  ಇಲ್ಲ..! ಆ  ವಿಚಾರದಲ್ಲಿ ಹಳ್ಳಿಯ ಅಪ್ಪ-ಅಮ್ಮ ಅಂತ ಹೇಳಿಕೊಳ್ಳುವುದಕ್ಕೆ  ಹೆಮ್ಮೆ ಅನಿಸುತ್ತದೆ.

ನನ್ನ ದಿನಚರಿ ಎಷ್ಟೊಂದು ಸೊಗಸಾಗಿತ್ತು  ಆ  ಕಾಲದಲ್ಲಿ..! ಕೋಳಿಯ ಘಂಟನಾದವೆ  ಏಳಬೇಕು ಎನ್ನುವುದರ ಗಂಟೆ ಯಾಗಿರುತಿತ್ತು.ಅಷ್ಟು ಹೊತ್ತಿಗಾಗಲೇ ಕಾಡಿನ  ಪಕ್ಷಿಗಳ ಸುಪ್ರಭಾತ ಸುರುವಾಗಿರುತಿತ್ತು. ಅಮ್ಮ ಎದ್ದು ರೇಡಿಯೋ ತಿರುವಿದಾಗ -'ಆಕಾಶವಾಣಿ ಧಾರವಾಡ...ಈಗ ಚಿಂತನ...' ಎನ್ನುತ್ತಾ ಮುಂದೆ ವಿವಿಧ ಕಾರ್ಯಕ್ರಮಗಳನ್ನು  ಬಿತ್ತರಿಸುತಿತ್ತು(ಈಗಲೂ  ಇದೆ). ಎಲ್ಲ ನೈಸರ್ಗಿಕ ಕೆಲಸಗಳಿಗೆ ಹೊರ ಹೋಗುವುದು ಹಳ್ಳಿಯ ಸಂಪ್ರದಾಯ. ಸುತ್ತಲು ಇರುವ ಗುಡ್ಡದ ಮೇಲೆ ಹೋದಾಗ  ಕಾಣುವ ಗಿಡಗಳ ಹೂವು ಇತ್ಯಾದಿಗಳನ್ನು ತೆರೆದು ಚೆಲ್ಲುತ್ತ ....ಗುಬ್ಬಿ ಕಂಡರೆ  ಅದು ಹಾರಿದ ಗಿಡದ ಗೊಂಚಲಿನಲ್ಲಿ ಅದರ ಗೂಡು ಇದೆಯೇ ಎಂದು ನೋಡಿ...ಅದು ಮುಂದೆ ಎಲ್ಲಿ ಹೋಗುತ್ತದೆ ಎಂತ ಗಮನಿಸಿ...ವಿಶಾಲ ವಾದ ಬೆಟ್ಟದಲ್ಲಿ ಅದು ಮರೆಯದಾಗಲೇ ಗುಬ್ಬಿಯನ್ನು ಮರೆಯುವನ್ತೆಯಾಗುತಿತ್ತು. ಗುಯಂ  ಎಂದು ಎಲ್ಲಿ ಯಾದರು ಜೇನು ನೋಣ ದ ಝೇಂಕಾರ ಕೇಳಿದರೆ ಸಾಕು...ಜೇನು ಸಂಶೋಧನ ಕಾರ್ಯಕ್ರಮ ಸುರುವಾಗಿಯೇ ಬಿಡುತ್ತದೆ ...ಹೂವು ಬಿಟ್ಟಿರುವ ಮರಗಳಿಗೆ ಎಷ್ಟೊಂದು ಜೇನು ನೊಣಗಳು ಸುತ್ತು ಕೊಂಡಿರುತ್ತವೆ  ಅಂದರೆ  ಅಪ್ಪ- ಅಮ್ಮ ಬಂದು ಅಲ್ಲಿ ಇರುವುದು ಜೇನು ನೊಣ ಮಾತ್ರ; ಜೇನು ಖಂಡಿತ ಇಲ್ಲವೆಂದು ಸಂಶೋಧನ ಕಾರ್ಯಕ್ರಮಕ್ಕೆ ಷರಾ  ಬರದಾಗಲೇ ಒಂದು ಬಗೆಯ ಸಮಾಧಾನ.  ಅಂತು ಇಂತೂ ಬೆಳಗ್ಗಿನ ತಿಂಡಿ ಮುಗಿಸಿ ಅಪ್ಪ -ಅಮ್ಮ ತಮ್ಮ ರೈತತನದ  ಕೆಲಸಗಳಿಗೆ ನಡೆದರೆ ಮನೆಯ ಮುಂದಿನ ಧೂಳಿನಲ್ಲಿ ರಸ್ತೆಗಳನ್ನು ನಿರ್ಮಿಸಿ  ಬಾಳೆ  ಗಿಡದ ದಿಂಡಿನಿಂದ  ಗಾಡಿ ತಯಾರಿಸಿ ಓಡಿಸುತಿದ್ದೆ . ನಾನು ಪ್ಲಾಸ್ಟಿಕ್ ನ ಅಂತಹ ಆಟಿಕೆ ಗಳನ್ನು ನನ್ನ ಬಾಲ್ಯದ ದಿನಗಳಲ್ಲಿ ನೋಡಿಯೇ ಇರಲಿಲ್ಲ. ತೋಟಕ್ಕೆ ನೀರು  ಬಿಡುವ ಕೆಲಸವಂತೂ ಬದಲು  ಯಾವುತ್ತು ಮುಂದೆ . ನಾನೆ ಜಲಪಾತಗಳನ್ನು ನಿರ್ಮಿಸಿ ಅದರಲ್ಲೇ ಸ್ನಾನ ಮಾಡಿಸಿ...ಕೆಲವೊಮ್ಮೆ ಬಟ್ಟೆ ಧರಿಸಯೂ  ಕೆಲೋಮ್ಮೆ ಬೆತ್ತಲಾಗಿಯೂ   ತುಳಿಸಿ ಕಟ್ಟೆಗೆ ಭಾರಿ ಪೂಜೆ ಮಾಡಿದ ದಿನಗಳಿವೆ.   ಇನ್ನು ತೋಟಕ್ಕೆ ಹೋದರೆ ಸಾಕು - ಪೆರ್ಲ ಹಣ್ಣು, ಜಾಮ್ಬಲೇ ಹಣ್ಣ...ಹೆಸರು ತಿಳಿಯದ ಹಲವಾರು ಬಗೆಯ ಹಣ್ಣುಗಳನ್ನು ತಿನ್ನುತಿದ್ದೆ. ಮಧ್ಯಾಹ್ನ ಊಟದ ಬಳಿಕ  ಒಂದು ಸಮಾಧಾನದ ನಿದ್ರೆ ... ಆ ಬಳಿಕ ಮತ್ತೆ ... ಇಂತ ಕ್ರಿಯಾತ್ಮಕ ಚಟುವಟಿಕೆಗಳು  ಮುಗಿಸಿ ಮನೆ ಸೇರುವಾಗ , ಮತ್ತೆ ರೇಡಿಯೋ, " ಆಕಾಶವಾಣಿ ಧಾರವಾಡ...ಕೃಷಿ ರಂಗ ' ಅಂದಾಗಲೇ ಇಂದಿನ ಹಗಲ ಚಟುವಟಿಕೆ ಮುಗಿಯಿತು ಅಂತಾನೆ ಅರ್ಥ.  ಹೀಗೆ ಬರೆಯುತ್ತ ಹೋದರೆ ಇಂತ  ನನ್ನ ಬದುಕು ಹಳ್ಳಿಯಲ್ಲಿ ಎಷ್ಟೋ ಚೆನ್ನಾಗಿತ್ತು ಅಂತ ಈಗ ಅನಿಸುತ್ತದೆ.  

ಎಂಟನೇ  ವರ್ಷದಲ್ಲಿ  ಶಾಲೆ ಸೇರಿ.... ಅಂಗನವಾಡಿಯಂತ ಶಾಲೆ ಸೇರದೆ ಬಾಲ್ಯದ ದಿನಗಳನ್ನು ಪರಿಪೂರ್ಣವಾಗಿ ಕಳೆದೆ ಅನಿಸುತ್ತದೆ. ಆದರೆ ಇಂದಿನ ಮಕ್ಕಳು ಹೇಗಿದ್ದಾರೆ...? ಅವರ ನಗು ? ಅವರ ಸೃಜನಶೀಲತೆಗೆ ಏನಾಗಿದೆ ?
ಇತ್ಯಾದಿ ವಿವರಗಳೊಂದಿಗೆ ಮತ್ತೆ ಬರುತ್ತೇನೆ. ನವೆಂಬೆರ್ 14 -ಮಕ್ಕಳ ದಿನಾಚರಣೆಯ ನಿಮ್ಮಿತ್ತ ಒಂದು ವಿಚಾರಧಾರೆ..

No comments:

Post a Comment