Tuesday, November 13, 2012

ಮಕ್ಕಳ ದಿನಾಚರಣೆ:ಭಾಗ-2

ಮಕ್ಕಳ ದಿನಾಚರಣನೆ ಭಾಗ-1 ರಲ್ಲಿ ನನ್ನ ಕೆಲವು ಬಾಲ್ಯದ ನೆನಪುಗಳನ್ನು ಕುರಿತು ಬರೆದಿದ್ದೆ.
 
ಮಕ್ಕಳು ಅಂದರೆ ಅರಳಿ ನಿಂತ ಹೂವು; ಅತ್ಯಂತ ಜಟಿಲ ಪ್ರಶ್ನೆಗಳ ಆಗರ; ಎಡೆಬಿಡದ ಕುಣಿದಾಟ -ಚೀರಾಟ ; ನಡೆದಿದ್ದೆ ನಾಟ್ಯ; ನುಡಿದುದ್ದೆ  ಹಾಸ್ಯ; ಅದನ್ನೆಲ್ಲಾ  ಹಿಂಬಾಲಿಸಿ  ಬರುವ ಅಳು -ಕಣ್ಣೀರು. ಬಿಸ್ಕುಟ್ ಕೊಟ್ಟರೆ  ಅದು ಬೇಡ; ಅದರ ಪ್ಯಾಕ್  ಕವರೇ ಬೇಕು. ಅಣ್ಣ-ತಮ್ಮ ಇದ್ದರಂತೂ ತಮ್ಮನಿಗಿಂತ ಸ್ವಲ್ಪವೇ ಹೆಚ್ಚು ತನಗೆ ಬೇಕು ಅನ್ನುವ ಅಣ್ಣ; ತನ್ನ ಸಣ್ಣತನದಿಂದಲೇ ತಂದೆ ತಾಯಿಯರ  ಒಲವು ಗಳಿಸುವ ತಮ್ಮ ಎಷ್ಟೋ ಸಾರಿ ತನಗೆ ಬೇಕಾದುದ್ದನ್ನು  ಪಡೆಯುತ್ತಾನೆ. ಅಲ್ಲೊಂದು ಸಣ್ಣ  ಚೀರಾಟ -ಕಣ್ಣೀರು; ಇನ್ನು ಕಣ್ಣೀರು  ಆರುವ  ಮೊದಲೇ ಅಣ್ಣ-ತಮ್ಮ ಅನುಬಂಧವು ಆಟ-ಊಟ ಮುಂದುವರಿಸುತ್ತದೆ.

ಇಂತ ಬಾಲ್ಯದ ದಿನಗಳು ಇಂದು ನನ್ನ ಪಾಲಿಗಂತೂ  ಹೇಳಲಾಗದ -ಎಂದೆಂದೂ ನಟಿಸಲಾಗದ ನನ್ನದೇ ನಾಟಕ. ಅದ್ಭುತ-ನಿಶ್ಚಿಂತ-ಸ್ವತಂತ್ರ ಮನೋಗತಿ ಇಂದು ತಲುಪುವುದು ಅಸಾಧ್ಯವೇ ?  ಹೀಗಾಗಿ ಮಕ್ಕಳ ಬಗ್ಗೆ ನನ್ನಿಂದ ನಿಮ್ಮಲೆರಲ್ಲಿ ಕೆಲವು ಹೇಳಿಕೆಗಳಿವೆ;ಬೇಡಿಕೆಗಳಿವೆ. ಮನ್ನಿಸುತ್ತುರಿ ತಾನೇ?

ನಾನು ಕಂಡಿರುವ ಒಂದು ಅದ್ಭುತ ಜ್ಞಾನವೆಂದರೆ ಜೀವನದಲ್ಲಿ ಸುಖ -ಸಂತೋಷ -ಸಮಾಧಾನಗಳು ಮರೀಚಿಕೆ ಮಾತ್ರ.ಅವುಗಳನ್ನು ಹಿಂಬಾಲಿಸಿ ನಮ್ಮ ಕಾಲಿಗೆ ನಾವು ನೋವು ಮಾಡಿಕೊಳ್ಳುತೇವೆ  ಹೊರತು ಅದನ್ನು ಕೈ ಗೆ ಸಿಗುವುವುದು ಅಸಾಧ್ಯವೇ, ಸಿಕ್ಕರೂ ನಾವು ಹಿಂಬಾಲಿಸಿದ್ದು ಇದನ್ನೇ ಎಂಬ ಪ್ರಶ್ನೆ ಕಾಡುತ್ತದೆ; ಮತ್ತೆ ಓಡುವಂತೆ ಯಾಗುತ್ತದೆ. ಎಷ್ಟೋ ಮಂದಿ  ಅರಳು-ಮರಳು ಸ್ಥಿತಿ ತಲುಪಿದರೂ  ನಮಗೆ ಸಂತೋಷವೇ ಜೀವನದಲ್ಲಿ ಸಿಕ್ಕಿಲ್ಲ ಎಂದು ಕಣ್ಣೀರು ಬತ್ತಿ ಹೋಗಿದ್ದರು ಕಣ್ಣುಗಳನ್ನು ಅದುಮಿಕೊಂಡು ಗದ್ಗದಿತರಾಗಿದ್ದನ್ನು ಕಂಡಿದ್ದೇನೆ. ಹೀಗಾಗಿ ಜೀವನದ ಅತ್ಯಂತ ಸಂತೋಷದ ದಿನಗಳು ಬಾಲ್ಯ ಮಾತ್ರ ಎಂದು ತಿರ್ಮಾನಕ್ಕೆ ಬಂದಿದ್ದೇನೆ. ಪ್ರತಿಯೊಬ್ಬರಿಗೂ(ಮಗುವಿಗೂ) ಇಂತ  ಬಾಲ್ಯ ಪರಿಪೂರ್ಣವಾಗಿ ಅನುಭವಿಸುವ ಅವಕಾಶ ಸಿಗುವಂತಾಗಲಿ; ಅದಕ್ಕೆ ಹಿರಿತನದ ಪಟ್ಟ ಹಿಡಿದಿರುವ ತಾವುಗಳು ಅವಕಾಶ ಕಲ್ಪಿಸಿಕೊಡುವಂತಾಗಲಿ ಎಂದು ಮೊದಲ ಹೇಳಿಕೆ ನೀಡುತ್ತೇನೆ.

 ಮಮಗುವಿಗೆ ಸ್ವಾತಂತ್ರ್ಯ  ಕೊಡಿ. ಅದು ಮಣ್ಣಿನಲ್ಲಿ ಆಡಲಿ; ಗಿಡ-ಬಳ್ಳಿಗಳ ಜೊತೆ ನಿಲ್ಲಲಿ.ನಾಯಿ-ಬೆಕ್ಕು ಜೊತೆ ಬಾಂಧವ್ಯ  ಬೆಳೆಸಲಿ; ಓರಗೆಯ ಮಕ್ಕಳೊಂದಿಗೆ ಆಟ ಆಡಲಿ-ಜಗಳ ಮಾಡಲಿ; ಅವರ ಜಗಳಕ್ಕೆ ತಮ್ಮ ಮಗುವೆಂದು ಯಾವತ್ತು ಅವರನ್ನೇ ಹೊತ್ತುಕೊಳ್ಳದೆ  ಸಾಮಾಜಿಕ ನ್ಯಾಯೇನ ಅವರ ವಾದ-ವಿವಾದಗಳಿಗೆ ತೆರೆ ಎಳೆದು ಬಿಡಿ. ಅದ್ಭುತವಾಗಿ ಕೇಳಲ್ಪಡುವ ಆಶ್ಚರ್ಯಕಕರ ಮಕ್ಕಳ  ಪ್ರಶ್ನೆಗಳಿಗೆ ನೀವು ಎಂದಾದರೂ ಸಮರ್ಥವಾಗಿ ಉತ್ತರಿಸಿದ್ದಿರಾ ?  ಚಂದ್ರ ಯಾಕೆ ಹೇಗೆ ಮೇಲೆ ನಿಂತಿದ್ದಾನೆ ? ಆತ  ಯಾಕೆ ಕೆಳಗೆ ಬೀಳುವುದಿಲ್ಲ? ಹಕ್ಕಿಗಳು ಮರ ಬಿದ್ದರೆ ಏನು ಮಾಡುತ್ತವೆ ? ರಾತ್ರಿ ಮರದ ಕೆಳಗೆ ಮಲಗಿದ ಪ್ರಾಣಿಗಳು ಮರ ಬಿದ್ದರೆ ಹೇಗೆ  ತಪ್ಪಿಸಿ ಕೊಳ್ಳುತ್ತವೆ ? ಈ ಮಳೆಯಲ್ಲಿ ನಾಯಿ ತಿರುಗುತ್ತದೆ ; ದನ ಗಳು ಮೇಯುತ್ತಿವೆ ; ಆದರೆ ನಾನು ಮಾತ್ರ  ಮಳೆಗೆ ಹೋದರೆ ನನಗೆ ನೆಗಡಿ ಯಾಗುತ್ತದೆಯೇ?   ಮಕ್ಕಳಿಗೆ ಸಮರ್ಪಕ ಉತ್ತರ ಅಸಾಧ್ಯವೇ..! ಆದರು ನಾವು ಪ್ರಶ್ನೆಗಳನ್ನು  ನಿಷ್ಪ್ರಯೋಜಕ ಅಂತ ಮಾತ್ರ ಹೇಳ್ಬೇಡಿ.!

ಇಷ್ಟವಿಲ್ಲದ ಶಿಕ್ಷಣದ ಒತ್ತಡ ; ಇಷ್ಟವಾಗುವ ಹವ್ಯಾಸಕ್ಕೆ ತಡೆ ಖಂಡಿತ ತರಬೇಡಿ. ನಿಮ್ಮ ಮಗು ಪ್ರಕೃತಿಯ ಜೊತೆಯಲ್ಲಿ ಬೆಳೆಯುತ್ತ-ಗಮನಿಸುತ್ತ  ಅದುವೇ ಬೇಕಾದನ್ನು ಆಕರ್ಷಣೆಗೆ ಒಳಗಾಗಿ ಏನೋ  ಬೇಕೋ ಅದನ್ನು ಕಲಿಯುವಂತಾಗಲಿ. ನಿಮ್ಮ ಗುರಿ ಕೇವಲ ಮಗುವನ್ನು ಮಾನವ ಮುಖ್ಯವಾಹಿನಿಯತ್ತ ತರುವುದು ಮಾತ್ರ ವಾಗಿರಬೇಕು ಹೊರತು ಪ್ರತಿಯೊಂದು ನಡೆಯು ನಿಮ್ಮಿಂದಲೇ ನಿರ್ದೇಶಿಸಲ್ಪಟ್ಟರೆ ನಿಮ್ಮ ಮಗುವಿನ ಸ್ವಾತಂತ್ರ್ಯ ಕಸಿದ ಹಾಗೇನೆ. ಮಗುವು ಹಾಡುಗಾರನಾಗಲು ತವಿಕಿಸಿದರೆ ನೀವು ಇಂಜಿನಿಯರ್ ಆಗಲೇ ಬೇಕು ಅನ್ನುದು ಸರಿಯಲ್ಲ ಅನ್ನುದು ನನ್ನ ತಾತ್ಪರ್ಯ.

ಆದರೆ ಎಷ್ಟೋ ಮಕ್ಕಳ ಬದುಕು ನಾವು ಅಂದು ಕೊಂಡಂತೆ ಇಲ್ಲ. ಕೆಲವು ಮನೆಗಳಲ್ಲಿ  ಬಡತನ ಯಾವ ಪರಿ ಕಾಡಿದೆಯಂದರೆ  ಅವರಿಗೆ ಹಸಿವಿನ ಕುರಿತಾಗಿ ಚಿಂತೆಯನ್ನು ಉಳಿಸಿದೆ ಹೊರತು ಒಂದು ನಗುವ ಕಾರಣವನ್ನೇ ಕೊಟ್ಟಿಲ್ಲ. ಅಂತ ಮಕ್ಕಳಿಗೆ ಯಾವ ಶಿಕ್ಷಣ ? ಯಾವ ಕಲೆ?  ಏನು ಗುರಿ ಉಳಿದಿತು ಜೀವನದಲ್ಲಿ ?

ನಮ್ಮ ಬುದ್ಧಿವಂತ ಸಮಾಜದ ಇನ್ನೊಂದು ವಿಚಿತ್ರ  ನನ್ನ ತಲೆಯಲ್ಲಿ ಸುಳಿದು ಹೋಯಿತು. ಯಾಕಾದರೂ 'ಹೆಣ್ಣು ಮಗು ಬೇಡ- ಗಂಡು ಮಗು ಬೇಕು' ಎಂಬ ವಾದಕ್ಕೆ ನಮ್ಮ ಬುದ್ಧಿವಂತರೆಲ್ಲ ಗುರಿಯಾಗಿದ್ದರೋ ? ಇದರ ಪರಿಣಾಮವಾಗಿ  ದೇಶದಲ್ಲಿಯೇ  ಹೆಣ್ಣು-ಗಂಡುಗಳ ವಿಷಮ ಅನುಪತದಿಂದಾಗಿ  ಸಾಮಾಜಿಕ  ವಿಷಮಯ ಸ್ಥಿತಿಯೊಂದು ಬಂದು ಹೋದಗುವುದು ಅಂತು ಖಂಡಿತ. ಅದಕ್ಕೆ ' ಆರತಿಗೊಬ್ಬಳು  ಮಗಳು ಕೀರ್ತಿಗೊಬ್ಬ  ಮಗ ' ಎಂಬ ಮಾತು ಪಾಲಿಸಿದ್ರೆನೆ ಚೆನ್ನಾಗಿರುತ್ತೆ ಅನಿಸ್ತಾ ಇದೆ ರೀ..!

 ಈ  ಲೇಖನ ಇಲ್ಲಿಗೆ ನಿಲ್ಲಿಸುತ್ತೇನೆ. ನನ್ನ ಓರಗೆಯ ಮಕ್ಕಳು ದೀಪಾವಳಿಯ ಹಬ್ಬಕ್ಕಾಗಿ ಕೇಪು-ಪಟಾಕ್ಷಿ ಗಳೊಂದಿಗೆ ಹೊರಗೆ ಬಂದಿದ್ದವೆ. ನಾನು ಅವರ ಜೊತೆ ಮಗುವಿನಂತೆ ಪಾಲ್ಗೊಂಡು ಇವತ್ತು ಸಾರ್ಥಕ ಅಂತ ಭಾವಿಸುತ್ತೇನೆ.

No comments:

Post a Comment